image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಜ್ರಂಭಣೆಯಿಂದ ಜರುಗಿದ ಮಾರ್ತಾಜೆ ಮಣ್ಣ್ ಡ್ 'ಕೆಸರ್ದ ಗೊಬ್ಬು -2026'

ವಿಜ್ರಂಭಣೆಯಿಂದ ಜರುಗಿದ ಮಾರ್ತಾಜೆ ಮಣ್ಣ್ ಡ್ 'ಕೆಸರ್ದ ಗೊಬ್ಬು -2026'

ಬಂಟ್ವಾಳ: ಶ್ರೀ ಮಲರಾಯ ಗ್ರಾಮ ಸಮಿತಿಯ ವತಿಯಿಂದ ಮಾರ್ತಾಜೆ ಗುತ್ತು, ಸಜಿಪ ಮುನ್ನೂರು, ಬಂಟ್ವಾಳ  ಇವರಿಂದ ಆಯೋಜಿಸಲ್ಪಟ್ಟಿದ್ದ 2ನೇ ವರ್ಷದ 'ಕೇಸರ್ದ ಗೊಬ್ಬು - 2026' (ಕೆಸರುಗದ್ದೆ ಕ್ರೀಡಾಕೂಟ) ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಬೆಳಿಗ್ಗೆ  ಕೆಸರುಗದ್ದೆ ಉದ್ಘಾಟನಾ ಸಮಾರಂಭ ಮತ್ತು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಸಭಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿ ಶುಭ ಕೋರಿದರು. ನಂತರ ಕೆಸರರು ಗದ್ದೆಗೆ ಹಾಲು ಸುರಿದು ಹಿರಿಯರು ಪಂದ್ಯಾಟ ಉದ್ಘಾಟಿಸಿದರು. 

5 ವರ್ಷದ ಕೆಳಗಿನ ಮಕ್ಕಳಿಗೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳು ಉತ್ಸಾಹದಿಂದ ಜರುಗಿದವು. ಪುರುಷರು ಹಾಗೂ ಮಹಿಳೆಯರಿಗಾಗಿ ನಡೆದ ಮುಕ್ತ ವಿಭಾಗದ 100 ಮೀ. ಓಟ, ಹಳೆ ಬಂಡಿ ಎಳೆಯುವುದು, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಹಾಗೂ ವಿಶೇಷ ಆಕರ್ಷಣೆಯಾದ ಹಿರಿಯರಿಗೆ ಮತ್ತು ದಂಪತಿಗಳ ಸ್ಪರ್ಧೆಗಳು, ನಿಧಿ ಶೋಧನೆ ಮತ್ತು ಪಿರಮಿಡ್ ಕಣ್ಣು ಮುಡಕೆ ಒಡೆಯುವ ಕ್ರೀಡೆಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದವು.

ಸಂಜೆ  ಸಮಾರೋಪ ಸಮಾರಂಭ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. 

ಊರಿನ ಹಿರಿಯರು, ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಗ್ರಾಮೀಣ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು.

Category
ಕರಾವಳಿ ತರಂಗಿಣಿ