image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಭಕ್ತಿ ಜಾಥಾ

ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಭಕ್ತಿ ಜಾಥಾ

ಧರ್ಮಸ್ಥಳ: ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಯುವಕರು ಸುಮಾರು 380 ಕಿಲೋಮೀಟರ್ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪುವ ಮೂಲಕ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಅಪೂರ್ವ ಸಂದೇಶ ಸಾರಿದ್ದಾರೆ.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಸೈಕಲ್ ಪಟುಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯದರ್ಶಿ ಎ. ವಿ. ಶೆಟ್ಟಿ ಅವರು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರು. ಹಿರಿಯರು ಆರಂಭಿಸಿದ್ದ 36 ವರ್ಷಗಳ ಈ ಸುದೀರ್ಘ ಪರಂಪರೆಯನ್ನು ಇಂದಿನ ಯುವಕರು ಅದೇ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಾರ್ಗದುದ್ದಕ್ಕೂ ನೂರಾರು ಗ್ರಾಮಗಳ ಮೂಲಕ ಸಾಗಿದ ಈ ಜಾಥಾ, ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿ ಹಾಗೂ ಸದಾಚಾರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.

ಯುವಕರು ದುಶ್ಚಟಗಳಿಂದ ದೂರವಿದ್ದು ಶಿಸ್ತು ಮತ್ತು ಭಕ್ತಿಯ ಜೀವನ ನಡೆಸಬೇಕು ಎಂಬ ಉದಾತ್ತ ಉದ್ದೇಶದೊಂದಿಗೆ ನಡೆಸಲಾದ ಈ ಯಾತ್ರೆಯಲ್ಲಿ ಪಾಲ್ಗೊಂಡ ಯುವಕರು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಯುವಶಕ್ತಿ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಬೆಸೆಯುವ ಈ ಆದರ್ಶ ಸೈಕಲ್ ಜಾಥಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Category
ಕರಾವಳಿ ತರಂಗಿಣಿ