image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಪ್ಪಿನಮೊಗರು ಶ್ರೀ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸನ್ಮಾನ

ಜಪ್ಪಿನಮೊಗರು ಶ್ರೀ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸನ್ಮಾನ

ಮಂಗಳೂರು : ಜಪ್ಪಿನಮೊಗರು ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 18ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬೆಳಿಗ್ಗೆ 10:30ಕ್ಕೆ ನೆರವೇರಿತು. ಕಡೆಕಾರ್ ಗುರುವನ ಶ್ರೀ ದುರ್ಗಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯೋಗಿಶ್‌ ಕುಮಾರ್‌ ಜಪ್ಪು ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ನ್ಯಾಯವಾದಿ ಶ್ರೀ ಮೋಹನ್‌ ದಾಸ್‌ ರೈ ಎಕ್ಕೂರು ವಹಿಸಿಕೊಂಡಿದ್ದರು. ಶ್ರೀಮತಿ ನಿಶ್ಮಿತಾ ಪವನ್‌ ಶೆಟ್ಟಿಯವರು ವಿನೂತನ ಶೈಲಿಯಲ್ಲಿ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಬರಿ ಕ್ಯಾಟರರ್ಸ್‌ನ ಲ| ರಾಜೇಶ್‌ ಶೆಟ್ಟಿ, ಪಂಪ್‌ವೆಲ್‌ನ ಜಯಂತ್‌ ಜೆ. ಕೋಟ್ಯಾನ್‌, ಯಕ್ಷಸಿರಿ ಅಧ್ಯಕ್ಷ ಲ| ಉಮೇಶ್‌ ಅತಿಕಾರಿ ಹಾಗೂ ಲಯನ್ಸ್‌ ಕ್ಲಬ್‌ ಬೆಂದೂರ್‌ವೆಲ್ ಅಧ್ಯಕ್ಷ ಲ| ರವಿಕುಮಾರ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಭಾಗವಾಗಿ ಮಾಜಿ ಸೈನಿಕ ಸಂತೋಷ್‌ ಕುಲಾಲ್‌, ನವಮಂಗಳೂರು ಬಂದರು ಬಳಕೆದಾರರ ಸಂಘದ ಕೋಶಾಧಿಕಾರಿ ಶ್ರೀನಿವಾಸ್‌ ಕೆ. ಹಾಗೂ ಸ್ಪಂದನಾ ಮಂಗಳೂರು ಸಂಸ್ಥೆಯ ಮಾಲಕರಾದ ನಾಗರಾಜ್‌ ಉರ್ವಾ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಕಾರ್ಪೊರೇಟರ್‌ ಜೆ. ನಾಗೇಂದ್ರ ಕುಮಾರ್‌ ಪ್ರಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಮಲ್ಲಿಕಾ ಭಾನುಪ್ರಕಾಶ್‌ ಬಜಾಲ್‌ ಹಾಗೂ ಪ್ರಧಾನ ಕಾರ್ಯದರ್ಶಿ ಸುಭಾಷ್‌ ವಿ. ಅಡಪ ಕಾರ್ಯಕ್ರಮವನ್ನು ನಿರೂಪಿಸಿದರೆ, ಸಂಚಾಲಕ ಹರೀಶ್‌ ಶೆಟ್ಟಿ ತಾರ್ದೋಲ್ಯ ಧನ್ಯವಾದ ಸಲ್ಲಿಸಿದರು.

Category
ಕರಾವಳಿ ತರಂಗಿಣಿ