image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಆಗಸ್ಟ್ 21ರಂದು 'MPC - ರೋಟರಿ ಕೋಸ್ಟಲ್ MSME & ಸ್ಟಾರ್ಟ್‌ಅಪ್ ಕಾನ್ಕ್ಲೇವ್ 2026' ಆಯೋಜನೆ

ಮಂಗಳೂರಿನಲ್ಲಿ ಆಗಸ್ಟ್ 21ರಂದು 'MPC - ರೋಟರಿ ಕೋಸ್ಟಲ್ MSME & ಸ್ಟಾರ್ಟ್‌ಅಪ್ ಕಾನ್ಕ್ಲೇವ್ 2026' ಆಯೋಜನೆ

ಮಂಗಳೂರು : ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ joint ಆಗಿ ಇದೇ ಆಗಸ್ಟ್ 21, 2026 ರಂದು ಮಂಗಳೂರಿನ ಉರ್ವ ಸ್ಟೋರ್ ರಸ್ತೆಯ ತಾಜ್ ವಿವಾಂತ ಹೊಟೇಲ್ ಎದುರಿನ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ 'MPC - ರೋಟರಿ ಕೋಸ್ಟಲ್ MSME ಮತ್ತು ಸ್ಟಾರ್ಟ್‌ಅಪ್ ಕಾನ್ಕ್ಲೇವ್ 2026' ಅನ್ನು ಆಯೋಜಿಸಿವೆ. ಕರಾವಳಿ ಕರ್ನಾಟಕದ ಉದ್ಯಮಿಗಳು ಹಾಗೂ ನವೋದ್ಯಮಗಳನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕಾಂಕ್ಲೆವ್ ನ ನಿರ್ದೇಶಕ CA S. S ನಾಯಕ್ ತಿಳಿಸಿದರು.

ತಂತ್ರಜ್ಞಾನ, ವ್ಯಾಪಾರ, ಇ-ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವೆಗಳು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ MSMEಗಳು ಹಾಗೂ ನವೋದ್ಯಮಗಳನ್ನು ಬೆಂಬಲಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, SIDBI, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, SBI, ಪಂಜಾಬ್ & ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, MCC ಬ್ಯಾಂಕ್ ಹಾಗೂ ಕರಾವಳಿ ಕರ್ನಾಟಕದ ಮಿನಿ ರತ್ನ ಕಂಪನಿ MRPL ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿವೆ ಎಂದರು.

ಬೆಳಿಗ್ಗೆ 9:15ಕ್ಕೆ ಉಡುಪಿ ಕ್ಷೇತ್ರದ ಗೌರವಾನ್ವಿತ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ MSME, CIBIL ಸ್ಕೋರ್, ಬ್ಯಾಂಕ್ ಸಾಲ ಸೌಲಭ್ಯ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಹಾಗೂ ಆಹಾರ ಸಂಸ್ಕರಣೆ ಕುರಿತು ತಜ್ಞರಿಂದ ವಿಶೇಷ ಅಧಿವೇಶನಗಳು ನಡೆಯಲಿವೆ. ಸಂಜೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಶ್ರೀ ಬ್ರಿಜೇಶ್ ಚೌಟ ಅವರ ಉಪಸ್ಥಿತಿಯಲ್ಲಿ ಮಾದರಿ MSME ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಸಮಾವೇಶದಲ್ಲಿ ಭಾಗವಹಿಸಲು ಆಸಕ್ತ ಉದ್ಯಮಿಗಳು ನೋಂದಾಯಿಸಿಕೊಳ್ಳಲು ಕೋರುತ್ತೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಪಿ. ಜಿ. ಮಹೇಶ್ - ಕಾರ್ಯದರ್ಶಿ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್, ರೋ. ರವೀಂದ್ರ ಬಿ. ಎನ್. - ಅಧ್ಯಕ್ಷರು, ರೋಟರಿ ಕ್ಲಬ್, ಮಂಗಳೂರು ಕೇಂದ್ರ, ​ರೋ. ಜಾಕ್ಸನ್ ಸಲ್ಡಾನಾ - ಕಾರ್ಯದರ್ಶಿ, ರೋಟರಿ ಕ್ಲಬ್, ಮಂಗಳೂರು ಕೇಂದ್ರ, ರೋ. ಡ್ಯಾರಿಲ್ ಡಿಸೋಜ - ಕಾರ್ಯಕ್ರಮ ಸಂಯೋಜಕ, ಆರ್‌ಟಿಎನ್. ಪಿಡಿಜಿ ಎಂಪಿಎಚ್‌ಎಫ್ ಡಾ. ದೇವದಾಸ್ ರೈ - ರೋಟರಿ ಕ್ಲಬ್, ಮಂಗಳೂರು ಕೇಂದ್ರ, ಶ್ರೀ ಸತೀಶ್ ಮಾಬೆನ್ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿ, PMFME, ಮಂಗಳೂರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ