image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ 25 ಗಂಟೆಗಳ ಕಾಲ ನಿರಂತರ ದಾಸರ ಪದ ಗಾಯನ: ವಿಶ್ವ ದಾಖಲೆಗೆ ಸಂಗೀತ ಬಾಲಚಂದ್ರ ಸಜ್ಜು

ಉಡುಪಿಯಲ್ಲಿ 25 ಗಂಟೆಗಳ ಕಾಲ ನಿರಂತರ ದಾಸರ ಪದ ಗಾಯನ: ವಿಶ್ವ ದಾಖಲೆಗೆ ಸಂಗೀತ ಬಾಲಚಂದ್ರ ಸಜ್ಜು

ಮಂಗಳೂರು: ಸಂಗೀತ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಆಕಾಶವಾಣಿಯ ಕಲಾವಿದೆ ಸಂಗೀತ ಬಾಲಚಂದ್ರ ಅವರು ಸಜ್ಜಾಗಿದ್ದಾರೆ. ಕಳೆದ 25 ವರ್ಷಗಳಿಂದ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ 25 ವರ್ಷಗಳ ಸಂಗೀತ ಪಯಣದ ನೆನಪಿಗಾಗಿ 25 ಗಂಟೆಗಳ ಕಾಲ ನಿರಂತರವಾಗಿ 'ದಾಸರ ಪದ'ಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಭೀಮಾ ಜ್ಯುವೆಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಗಾಯನ ಕಾರ್ಯಕ್ರಮಕ್ಕೆ 'ಪಂಚವಿಂಶತಿ' ಎಂದು ಹೆಸರಿಸಲಾಗಿದೆ. ಮಹಿಳಾ ಗಾಯಕರೊಬ್ಬರು ಅತಿ ದೀರ್ಘ ಅವಧಿಗೆ, ಅಂದರೆ ಪ್ರಮುಖವಾಗಿ ದಾಸರ ಪದಗಳನ್ನೇ ಆಯ್ಕೆ ಮಾಡಿಕೊಂಡು ನಿರಂತರ 25 ಗಂಟೆಗಳ ಕಾಲ ಹಾಡುತ್ತಿರುವುದು ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಮೊದಲ ಪ್ರಯತ್ನವಾಗಿದೆ.

ಉಡುಪಿಯ ಶ್ರೀ ಕೃಷ್ಣ ಮಠದ ಹತ್ತಿರವಿರುವ ಗೀತಾ ಮಂದಿರದ ಶ್ರೀ ಪುತ್ರಿ ನೃಸಿಂಹ ಸಭಾಂಗಣದಲ್ಲಿ ಈ ಕಾರ್ಯಕ್ರಮವು ಜರುಗಲಿದೆ. ಆಗಸ್ಟ್ 23, 2026ರ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಈ ವಿಶಿಷ್ಟ ಕಾರ್ಯಕ್ರಮವು ಆಗಸ್ಟ್ 24, 2026ರ ಬೆಳಿಗ್ಗೆ 7:30ರವರೆಗೆ ನಿರಂತರವಾಗಿ ಮುಂದುವರಿಯಲಿದೆ.

ಕಾರ್ಯಕ್ರಮದ ಪ್ರಮುಖ ವಿಶೇಷತೆಗಳು:

  • 25 ಗಂಟೆಗಳ ಕಾಲ (1500 ನಿಮಿಷಗಳು) ನಿರಂತರವಾಗಿ ದಾಸರ ಪದಗಳ ಗಾಯನ ಜರುಗಲಿದೆ.
  • ಸಂಪೂರ್ಣವಾಗಿ ಹೊಸದಾಗಿ ಸ್ವರಯೋಜನೆ ಮಾಡಲಾದ 250 ದಾಸರ ಪದಗಳ ಪ್ರಸ್ತುತಿ ಇರಲಿದೆ.
  • ಕೀಬೋರ್ಡ್, ರಿಧಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕರನ್ನೊಳಗೊಂಡ 2 ಪ್ರತ್ಯೇಕ ಸಹ-ಕಲಾವಿದರ ತಂಡಗಳಿಂದ ನಿರಂತರ ಲೈವ್ ಮ್ಯೂಸಿಕ್ ಸಾಥ್ ಸಿಗಲಿದೆ.

Category
ಕರಾವಳಿ ತರಂಗಿಣಿ