image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ ಇರುವೈಲ್ ಪಾಣಿಲ 'ತಾಟೆ' ಮತ್ತು ಬೋಳದಗುತ್ತು 'ದೋಣಿ' ಗೆ ಶ್ರೇಷ್ಠ ಕೋಣ ಪ್ರಶಸ್ತಿ

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ ಇರುವೈಲ್ ಪಾಣಿಲ 'ತಾಟೆ' ಮತ್ತು ಬೋಳದಗುತ್ತು 'ದೋಣಿ' ಗೆ ಶ್ರೇಷ್ಠ ಕೋಣ ಪ್ರಶಸ್ತಿ

ಮಂಗಳೂರು:  ನಮ್ಮ ಕುಡ್ಲ ಚಾನಲ್ , ನಮ್ಮ ಕಂಬಳ ಟೀಂ ದುಬಾಯಿ ಮತ್ತು ಪಾಲೆಮಾರ್ ಗ್ರೂಪ್ ಆಯೋಜನೆಯಲ್ಲಿ ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ಮಂಗಳೂರಿನ ಮೇರಿಹಿಲ್ ಕೊಂಚಾಡಿಯ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಇರುವೈಲ್ ಪಾಣಿಲ 'ತಾಟೆ ' ಮತ್ತು ಬೋಳದಗುತ್ತು 'ದೋಣಿ ' ಎಂಬ ಎರಡು  ಕೋಣಗಳಿಗೆ ನಮ್ಮಕುಡ್ಲ ಶ್ರೇಷ್ಠ ಕೋಣ ಪ್ರಶಸ್ತಿ ನೀಡಿ ಈ ಕೋಣಗಳ ಯಜಮಾನರನ್ನು ಸನ್ಮಾನಿಸುವ ಮೂಲಕ  ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಮೂಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತ ಅರಸರು, ಸಂಸತ್ ಸದಸ್ಯ ಮತ್ತು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ, ಮಾಜಿ ಸಚಿವರಾದ ಬಿ ರಮಾನಾಥ ರೈ ಮತ್ತು ಕೃಷ್ಣ ಜೆ.ಪಾಲೆಮಾರ್, ಕಂಬಳ ಅಕಾಡೆಮಿ ಸಂಸ್ಥಾಪಕ ಪ್ರೊ. ಗುಣಪಾಲ ಕಡಂಬ, ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಬಾವ ಹರೀಶ್ ಶೆಟ್ಟಿ, ಕಂಬಳ ಸಂಘಟಕ ಹಾಗೂ ಕೋಣಗಳ ಮಾಲಕ ಮುನಿಯಾಲು ಉದಯ ಕುಮಾರ್ ಶೆಟ್ಟಿ,  ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ನಮ್ಮಕುಡ್ಲ ನಿರ್ದೇಶಕರಾದ ಲೀಲಾಕ್ಷ ಬಿ. ಕರ್ಕೇರ, ಹರೀಶ್ ಬಿ ಕರ್ಕೇರ, ಸುರೇಶ್ ಬಿ ಕರ್ಕೇರ, ಮೋಹನ್ ಬಿ ಕರ್ಕೇರ, ಸಂತೋಷ ಬಿ ಕರ್ಕೇರ, ಮ್ಯಾನೇಜರ್ ಸುದರ್ಶನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ರಾಜೀವ್ ಶೆಟ್ಟಿ ಯಡ್ತೂರು ಈ ಎರಡು ಕೋಣಗಳು ಮತ್ತು ಅವುಗಳ ಯಜಮಾನರನ್ನು ಪರಿಚಯಿಸಿದರು. ನಮ್ಮಕುಡ್ಲವಾಹಿನಿಯ ಸಿಒಒ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ