ಮಂಗಳೂರು:ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಅ.20ರ ಪೂರ್ವಾಹ್ನ 9.15ಕ್ಕೆ ಬೊಂಡಂತಿಲ ಗ್ರಾಮದ ತಾರಿಗುಡ್ಡೆಯಲ್ಲಿ ನೆರವೇರಲಿದೆ. ಎಂದು ಜಯರಾಮ ಪೂಜಾರಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೊಂಡಂತಿಲ ಗ್ರಾಮದ ತಾರಿಗುಡ್ಡೆಯ ಶ್ರೀಮತಿ ಬೇಬಿ ಪೂಜಾರಿ ಮನೆ ಹಸ್ತಾಂತರ ಪಡೆಯಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ದಯಾನಂದ ಬಂಗೇರ ನೆರವೇರಿಸಲಿದ್ದು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸುವರು. ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರ, ನ್ಯಾಯವಾದಿ ಟಿ.ಎನ್.ಪೂಜಾರಿ, ಇನ್ನೋರ್ವ ಸಲಹೆಗಾರ ಡಾ.ಎನ್.ಟಿ.ಅಂಚನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ಚಂದ್ರ ಕೆ ಹಾಗೂ ಸಮಾಜ ಸೇವಾ ನಿರ್ದೇಶಕ ಜಯರಾಮ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪೂರ್ವಾಹ್ನ 10 ಗಂಟೆಗೆ ಯುವ ವಾಹಿನಿಯ 35ನೇ ಘಟಕ ಯುವವಾಹಿನಿ ಪೆರ್ಮಂಕಿ ಘಟಕದ ಉದ್ಘಾಟನೆಯನ್ನು ಎಸ್ ಆರ್ ಆರ್ ಮಸಾಲ ಇಂಡಸ್ಟ್ರೀಸ್ ಮಾಲಕರಾದ ಶೈಲೇಂದ್ರ ವೈ.ಸುವರ್ಣ ನಡೆಸಿ ಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಹರೀಶ್ ಕೆ.ಪೂಜಾರಿ ವಹಿಸುವರು. ಕರ್ನಾಟಕ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಲ್ಲೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ರಾಜಾರಾಮ ಕೋಟ್ಯಾನ್, ಪೆರ್ಮಂಕಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಭಜನಾ ಮಂದಿರದ ಅಧ್ಯಕ್ಷರಾದ ಪ್ರವೀಣ್ ಅಂಚನ್ ಹಾಗೂ ಸತ್ತಿಕಲ್ಲು ಗುರುನಗರದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ದೀಕ್ಷಿತ್ ಪೂಜಾರಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಜಗದೀಶ್ಚಂದ್ರ ಕೆ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಕುಮಾರ್, ಹರೀಶ್ ಕೆ ಪೂಜಾರಿ,ಪ್ರಸಾದ್ ಪಾಲನ್ ಮತ್ತು ಕೀರ್ತಿ ಕುಮಾರ್ ಉಪಸ್ಥಿತರಿದ್ದರು.