image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ 7ನೇ 'ಕೆಸಿಸಿಐ ಕಾನ್ಕ್ಲೇವ್' ಯಶಸ್ವಿ: ಉದ್ಯಮ ಹಾಗೂ ಆರ್ಥಿಕತೆ ಕುರಿತು ಚರ್ಚೆ

ಮಂಗಳೂರಿನಲ್ಲಿ 7ನೇ 'ಕೆಸಿಸಿಐ ಕಾನ್ಕ್ಲೇವ್' ಯಶಸ್ವಿ: ಉದ್ಯಮ ಹಾಗೂ ಆರ್ಥಿಕತೆ ಕುರಿತು ಚರ್ಚೆ

ಮಂಗಳೂರು : ಮಂಗಳೂರಿನ ಡಾ. ಟಿಎಂಎ ಪೈ ಇಂಟರ್‌ನೇಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಕೆಸಿಸಿಐ) ವತಿಯಿಂದ 7ನೇ ಆವೃತ್ತಿಯ 'ಕೆಸಿಸಿಐ ಕಾನ್ಕ್ಲೇವ್' ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಉದ್ಯಮಿಗಳು, ಉದ್ಯಮ ನಾಯಕರು ಹಾಗೂ ವೃತ್ತಿಪರರು ಭಾಗವಹಿಸಿ, ಉದ್ಯಮ ಕ್ಷೇತ್ರದ ಬೆಳವಣಿಗೆ, ಆರ್ಥಿಕತೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ವಿಚಾರ ವಿನಿಮಯ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್, 86 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೆಸಿಸಿಐ, ದಕ್ಷಿಣ ಕನ್ನಡ ಜಿಲ್ಲೆಯನ್ನು ನಿರಂತರ ಆರ್ಥಿಕ ಚಟುವಟಿಕೆ, ಉದ್ಯೋಗ ಸೃಷ್ಟಿ ಹಾಗೂ ಸಮಗ್ರ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು. ಕೆಸಿಸಿಐನ 'ಇಂಡಸ್ಟ್ರಿ ಅಕಾಡೆಮಿಯಾ ಇಂಟರ್‌ಕನೆಕ್ಟ್' ಯೋಜನೆಯಡಿ ಈವರೆಗೆ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜೊತೆಗೆ 'ಬ್ರ್ಯಾಂಡ್ ಮಂಗಳೂರು' ಉಪಕ್ರಮದ ಮೂಲಕ ನಗರದ ಕೈಗಾರಿಕೆ, ಸಂಸ್ಕೃತಿ ಹಾಗೂ ವಿವಿಧ ಅವಕಾಶಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ಭಾಗವಾಗಿ ಸೈಕಲ್ ಪ್ಯೂರ್ ಅಗರ್‌ಬತ್ತಿ ತಯಾರಕರಾದ ಎನ್ಆರ್ ಗ್ರೂಪ್‌ನ ನಿರ್ದೇಶಕ ಅರ್ಜುನ್ ರಂಗ ಅವರೊಂದಿಗೆ ಕೆಸಿಸಿಐ ಮಾಜಿ ಅಧ್ಯಕ್ಷ ಸಿಎ ಶ್ರೀನಿವಾಸ್ ಎಸ್. ಕಾಮತ್ ವಿಚಾರಪೂರ್ಣ ಸಂವಾದ ನಡೆಸಿದರು.

Category
ಕರಾವಳಿ ತರಂಗಿಣಿ