ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಬಳಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಿರ್ಮಾಣ ಹಂತದಲ್ಲಿರುವ ಹವಾನಿಯಂತ್ರಿತ ಸಭಾಭವನದ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಜರುಗಿತು.
ಸಭೆಯ ನಂತರ ಅಧಿಕಾರಿಗಳು ಮತ್ತು ಪದಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ನಡೆಸಿತು. ಸಭಾಭವನದ ನಿರ್ಮಾಣ ಕಾರ್ಯವು ಅತ್ಯಂತ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರತಿಯೊಬ್ಬರ ಪೂರ್ಣ ಸಹಕಾರ ಅಗತ್ಯ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಹಾಗೂ ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು. ಅಲ್ಲದೆ, ಆರ್ಕಿಟೆಕ್ಟ್ ಗೋಪಾಲ್ ಭಟ್ (ಎ. ಜಿ. ಅಸೋಸಿಯೇಟ್ ಉಡುಪಿ), ತಾರಾನಾಥ್ ಶೆಟ್ಟಿ ಮುಂಬೈ, ಸಹಾಯಕ ಇಂಜಿನಿಯರ್ ಧೀರಜ್ ಉಡುಪಿ, ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರಾದ ಶಿವಪ್ರಸಾದ್ ರೈ, ರವಿ ರಾಜ್ ಶೆಟ್ಟಿ ಜತ್ತಬೆಟ್ಟು ಹಾಗೂ ಹವಾನಿಯಂತ್ರಣ, ಎಲೆಕ್ಟ್ರಿಕಲ್, ಫಾಲ್ಸ್ ಸೀಲಿಂಗ್, ಸೌಂಡ್ ಸಿಸ್ಟಮ್ ಮತ್ತು ಅಕೋಸ್ಟಿಕ್ ವಿಭಾಗದ ಕನ್ಸಲ್ಟೆಂಟ್‌ಗಳು ಹಾಗೂ ಸರಬರಾಜುದಾರರು ಭಾಗವಹಿಸಿದ್ದರು.