image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾನ್ಫಿಡದಲ್ಲಿ ಹಿರಿಯ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ದಿನೇಶ್ ಬಾಬು ಅವರಿಂದ ಧ್ವಜಾರೋಹಣ..

ಕಾನ್ಫಿಡದಲ್ಲಿ ಹಿರಿಯ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ದಿನೇಶ್ ಬಾಬು ಅವರಿಂದ ಧ್ವಜಾರೋಹಣ..

ಬೆಂಗಳೂರು: ಭಾರತೀಯ ಚಿತ್ರರಂಗದ ದಿಗ್ಗಜರುಗಳಾದ ಪುಟ್ಟಣ್ಣ ಕಣಗಾಲರು, ಸಿದ್ಧಲಿಂಗಯ್ಯನವರು,  ಲಕ್ಷ್ಮೀನಾರಾಯಣರು, ಕೆ ಎಸ್ ಎಲ್ ಸ್ವಾಮಿಯವರು, ರಾಜೇಂದ್ರ ಸಿಂಗ್ ಬಾಬು ಅವರು ಮುಂತಾದ ಅಗ್ರಗಣ್ಯರು ಸೇರಿ 1984ರಲ್ಲಿ ಕರ್ನಾಟಕದ ಚಲನಚಿತ್ರ ನಿರ್ದೇಶಕರ ಒಳಿತಿಗಾಗಿ ಸ್ಥಾಪಿಸಿದ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಫಿಡ).

42 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಂಸ್ಥೆಯಿಂದ ಬಹಳ ಅಚ್ಚುಕಟ್ಟಾಗಿ ಅಗಸ್ಟ್ 15ರಂದು ಬೆಳಿಗ್ಗೆ 8 ಗಂಟೆಗೆ ಗಾಂಧಿನಗರದಲ್ಲಿರುವ  ಸಂಘದ ಕಚೇರಿ ಮುಂಭಾಗದಲ್ಲಿ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು  ಆಚರಿಸಲಾಯಿತು. ಹಿರಿಯ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ದಿನೇಶ್ ಬಾಬು ಅವರು ಧ್ವಜಾರೋಹಣ ಮಾಡಿ ಚಿತ್ರರಂಗದ ಸಮಸ್ತರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂಧರ್ಭದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ  ಸಮಿತಿ ಸದಸ್ಯರು, ಉಪ ಸಮಿತಿ ಸದಸ್ಯರುಗಳು ಮತ್ತು ಸಂಘದ ಇತರ ಸದಸ್ಯರು ಪಾಲ್ಗೊಂಡಿದ್ದರು. ಧ್ವಜಾರೋಹಣದ ನಂತರ ಹಿರಿಯ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ದಿನೇಶ್ ಬಾಬು ಅವರನ್ನು ಸಂಘದ ಕಚೇರಿಯಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

Category
ಕರಾವಳಿ ತರಂಗಿಣಿ