image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾನು ದುಡ್ಡು ಮಾಡುವ ಸಲುವಾಗಿ ತುಳು ಚಿತ್ರ ಮಾಡಿದ್ದಲ್ಲ, ನನ್ನ ಹೆಂಡತಿಯ ಪ್ರೀತಿಗೋಸ್ಕರ- ಗೋಲ್ಡನ್ ಸ್ಟಾರ್ ಗಣೇಶ್

ನಾನು ದುಡ್ಡು ಮಾಡುವ ಸಲುವಾಗಿ ತುಳು ಚಿತ್ರ ಮಾಡಿದ್ದಲ್ಲ, ನನ್ನ ಹೆಂಡತಿಯ ಪ್ರೀತಿಗೋಸ್ಕರ- ಗೋಲ್ಡನ್ ಸ್ಟಾರ್ ಗಣೇಶ್

ಮಂಗಳೂರು: ನಾನು ದುಡ್ಡು ಮಾಡುವ ಸಲುವಾಗಿ ತುಳು ಚಿತ್ರ ಮಾಡಿದ್ದಲ್ಲ,  ನನ್ನ ಹೆಂಡತಿಯ  ಪ್ರೀತಿಗೋಸ್ಕರ ಮಾತ್ರ. ಈ ಚಿತ್ರದಿಂದ ಅವಳು ಖುಷಿಯಾಗಿದ್ದಾಳೆ. ಈ ಚಿತ್ರದಿಂದ ಲಾಭದ ನಿರೀಕ್ಷೆಯೂ ಇಲ್ಲ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು. ಸಂದೀಪ್ ಬೆದ್ರ ನಿರ್ದೇಶನದ ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾದ ದ್ವಿಭಾಷಾ ಚಲನಚಿತ್ರ ‘ಪಿಕ್ಚರ್‘ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿನಿಮಾದ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿದ್ದ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನನಗೂ ಮಂಗಳೂರಿಗೂ ಉತ್ತಮ ಸಂಬಂಧವಿದೆ. ಹೊಸ ಪ್ರತಿಭೆಗಳ ಜೊತೆಗೆ ತುಳುನಾಡಿನ ಹಿರಿಯ, ಕಿರಿಯ ಕಲಾವಿದರನ್ನು ಈ ಚಿತ್ರದಲ್ಲಿ ಒಗ್ಗೂಡಿಸಿರುವುದು ವಿಶೇಷ. ಕುಟುಂಬದ ಎಲ್ಲಾ ವರ್ಗದ ಜನರಿಗೆ ಈ ಚಿತ್ರವು ಇಷ್ಟವಾಗಲಿದ್ದು ಎಲ್ಲರೂ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. 

ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಕ್ಕೆ ಮಂಗಳೂರು, ಪುತ್ತೂರು ಮತ್ತು ಉಡುಪಿಯ ಪ್ರೀಮಿಯರ್ ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತುಳು ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ತಾಂತ್ರಿಕ ತಂಡದ ಸಹಕಾರದಿಂದ ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ ಎಂದು ಹೇಳಿದರು.

ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ಅಮೃತಾ ಮುಖ್ಯಭೂಮಿಕೆಯಲ್ಲಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ಮತ್ತು ಅರ್ಜುನ್ ಕಾಪಿಕಾಡ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್.ಛಾಯಾಗ್ರಹಣ, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜನೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ