image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಟ ಕಾರ್ತಿ - ನಿರ್ದೇಶಕ ಮೋಹನ್ ರಾಜ ಜೋಡಿಯ ಹೊಸ ಸಿನಿಮಾ ಘೋಷಣೆ: ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದ ಬಿಗ್ ಬಜೆಟ್ ಕೌಟುಂಬಿಕ ಚಿತ್ರ!

ನಟ ಕಾರ್ತಿ - ನಿರ್ದೇಶಕ ಮೋಹನ್ ರಾಜ ಜೋಡಿಯ ಹೊಸ ಸಿನಿಮಾ ಘೋಷಣೆ: ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದ ಬಿಗ್ ಬಜೆಟ್ ಕೌಟುಂಬಿಕ ಚಿತ್ರ!

ತಮಿಳು ಚಿತ್ರರಂಗದಲ್ಲಿ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ಮಾಣ ಸಂಸ್ಥೆ ‘ಪ್ರಿನ್ಸ್ ಪಿಕ್ಚರ್ಸ್’, ತನ್ನ ಹೊಸ ಸಿನಿಮಾವನ್ನು ಅಧಿಕೃತವಾಗಿ ಪ್ರಕಟಿಸಿದೆ. ‘ಸಿಂಗಂ 2’ ಮತ್ತು ‘ಸರ್ದಾರ್’ ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಸ್. ಲಕ್ಷ್ಮಣ್ ಕುಮಾರ್, ಈ ಬಾರಿ ನಟ ಕಾರ್ತಿ ಹಾಗೂ ಖ್ಯಾತ ನಿರ್ದೇಶಕ ಮೋಹನ್ ರಾಜ ಅವರ ಜೊತೆಗೆ ಹೊಸ ಕೌಟುಂಬಿಕ ಮನರಂಜನಾ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಕುಟುಂಬ, ಭಾವನಾತ್ಮಕ ಸನ್ನಿವೇಶಗಳು ಮತ್ತು ನಾಯಕತ್ವದ ಸಾಹಸವನ್ನು ಒಳಗೊಂಡ ವಿಶಿಷ್ಟ ಕಥಾಹಂದರ ಈ ಸಿನಿಮಾದಲ್ಲಿದ್ದು, ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲು ಚಿತ್ರತಂಡ ಸಜ್ಜಾಗಿದೆ. ತಮ್ಮ ವೃತ್ತಿಜೀವನದಲ್ಲಿ ಕೌಟುಂಬಿಕ ಕಥಾಹಂದರಗಳ ಮೂಲಕವೇ ಅಪಾರ ಯಶಸ್ಸು ಕಂಡಿರುವ ನಟ ಕಾರ್ತಿ, ಇದೀಗ ಈ ಹೊಸ ಸಿನಿಮಾದ ಮೂಲಕ ಮತ್ತೆ ಅಂತಹದ್ದೇ ಶೈಲಿಯತ್ತ ಮುಖ ಮಾಡಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿ, ಎಲ್ಲರ ಪ್ರೀತಿಪಾತ್ರರಾಗುವಂತಹ ವಿಶಿಷ್ಟ ಪಾತ್ರದಲ್ಲಿ ಅವರು ಮತ್ತೆ ರಂಜಿಸಲಿದ್ದಾರೆ ಎಂಬುವುದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

‘ಸಂತೋಷ್ ಸುಬ್ರಮಣ್ಯಂ’, ‘ವೇಲಾಯುಧಂ’, ‘ಥನಿ ಒರುವನ್’ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮೋಹನ್ ರಾಜ ಅವರಿಗೆ ಇದು ಚಿತ್ರರಂಗದಲ್ಲಿ 25ನೇ ವರ್ಷದ ಸಂಭ್ರಮವಾಗಿದೆ. ಈ ಮೈಲಿಗಲ್ಲಿನ ಸಂದರ್ಭದಲ್ಲೇ ನಟ ಕಾರ್ತಿ ಜೊತೆ ಕೈಜೋಡಿಸಿರುವುದು ಸಿನಿಪ್ರಿಯರಲ್ಲಿ ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಕುತೂಹಲ ಹುಟ್ಟುಹಾಕಿದೆ.

ಎಸ್. ಲಕ್ಷ್ಮಣ್ ಕುಮಾರ್ ನಿರ್ಮಾಣದ ಈ ಬೃಹತ್ ವೆಚ್ಚದ ಚಿತ್ರದಲ್ಲಿ ಪ್ರಸಿದ್ಧ ಕಲಾವಿದರ ದಂಡು ಹಾಗೂ ಅನುಭವಿ ತಾಂತ್ರಿಕ ಬಳಗ ಇರಲಿದೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಚಿತ್ರದಲ್ಲಿ ನಟಿಸಲಿರುವ ಇತರ ಕಲಾವಿದರು, ತಾಂತ್ರಿಕ ಸಿಬ್ಬಂದಿ ಹಾಗೂ ಸಿನಿಮಾ ಬಿಡುಗಡೆಯ ಕುರಿತು ಹೆಚ್ಚಿನ ವಿವರಗಳನ್ನು ಮುಂಬರುವ ವಾರಗಳಲ್ಲಿ ಚಿತ್ರತಂಡ ಹಂಚಿಕೊಳ್ಳಲಿದೆ. ಈ ಸಿನಿಮಾವನ್ನು ಘೋಷಿಸುತ್ತಾ, "ಒಂದು ಹೊಸ ಪಯಣ ಆರಂಭವಾಗಿದೆ" ಎಂದು ನಿರ್ಮಾಣ ಸಂಸ್ಥೆ ಪ್ರಿನ್ಸ್ ಪಿಕ್ಚರ್ಸ್ ಸಂತಸ ಹಂಚಿಕೊಂಡಿದೆ.

Category
ಕರಾವಳಿ ತರಂಗಿಣಿ