image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜುಲೈ 25 ಶನಿವಾರದಂದು ಮಂಗಳೂರಿನಲ್ಲಿ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಆಡಿಷನ್

ಜುಲೈ 25 ಶನಿವಾರದಂದು ಮಂಗಳೂರಿನಲ್ಲಿ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಆಡಿಷನ್

ಮಂಗಳೂರು: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ. ಈಗ ಕರ್ನಾಟಕದ ಅಮ್ಮಂದಿರ ಸರಣಿ. ಕನ್ನಡಿಗರನ್ನು ಕುಣಿಸಿ, ಮನರಂಜಿಸಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಅತೀ ಶೀಘ್ರದಲ್ಲಿ ಶುರುವಾಗಲಿದ್ದು ಇದರ ಆಡಿಷನ್ ಇದೇ ತಿಂಗಳ 24 ರಿಂದ ನಡೆಯಲಿದೆ ಎಂದು Zಕನ್ನಡ ಪ್ರಕಟಣೆಯಲ್ಲಿ ತಿಳಿಸಿದೆ.

ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಸದಾ ಪರರಿಗೋಸ್ಕರ ದುಡಿಯುವ ಅಮ್ಮಂದಿರಿಗೆ ಇದೊಂದು ಉತ್ತಮ ಅವಕಾಶ, ಡ್ಯಾನ್ಸ್ ಬಗ್ಗೆ ಆಸಕ್ತಿ ಇರುವ, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ. ದಿನಾಂಕ 25 ಜುಲೈ 2026 ಶನಿವಾರದಂದು ಬೆಳಗ್ಗೆ 9 ಗಂಟೆಗೆ,ಎಸ್.ಡಿ.ಎಂ. ಸ್ಕೂಲ್,ಶೇಡಿಗುರಿ, ಅಶೋಕನಗರ, ಮಂಗಳೂರು. ಇಲ್ಲಿ ಆಡಿಷನ್ ನಡೆಯಲಿದೆ.
ವಿಶೇಷ ಸೂಚನೆ: ಈ ಆಡಿಷನ್ ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.
ಅಮ್ಮಂದಿರಿಗೆ ಸಿಕ್ಕಿದೆ ಹೆಜ್ಜೆ ಹಾಕೋ ಅವಕಾಶ; ತಡ ಯಾಕೆ, ಆಡಿಷನ್ ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!

Category
ಕರಾವಳಿ ತರಂಗಿಣಿ