ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಮಾರ್ಟಿನ್ ಮಧ್ಯ ರಾತ್ರಿಯೇ 3000ಕ್ಕೂ ಅಧಿಕ ತೆರೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಗ್‌ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಕನ್ನಡದ ಜತೆಗೆ ವರ್ಲ್ಡ್ ಲೆವೆಲ್‌ಗೆ ರಿಲೀಸ್ ಮಾಡಲಾಗಿದೆ.
ಇತ್ತೀಚಿಗಷ್ಟೇ ಮುಂಬೈನಲ್ಲಿ ವಿವಿಧ ದೇಶಗಳ ಸಿನಿಮಾ ಪತ್ರಕರ್ತರನ್ನೂ ಕರೆಸಿ ದೊಡ್ಡ ಮಟ್ಟದ ಸುದ್ದಿಗೋಷ್ಠಿ ಆಯೋಜಿಸಿತ್ತು. ಅದರಂತೆ, ವಿಶ್ವದಾದ್ಯಂತ ಮಾರ್ಟಿನ್ ಸಿನಿಮಾ 3000 ಸ್ಕ್ರಿನ್ ಗಳ ಮೇಲೆ ಅಬ್ಬರಿಸುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಸಂಚಲನ ಮೂಡಿಸಿರುವ ಮಾರ್ಟಿನ್ ಚಿತ್ರದ ಮೇಲೆ ಬರೀ ಕನ್ನಡಿಗರಷ್ಟೇ ಅಲ್ಲದೆ ಪರಭಾಷಿಕರ ದೃಷ್ಟಿಯೂ ಬಿದ್ದಿದೆ. ಅದಕ್ಕೆ ಕಾರಣ ಸಿನಿಮಾ ಮೇಕಿಂಗ್ ಎಂದರೆ ತಪ್ಪಾಗಲಾರದು. ಮೈನವಿರೇಳಿಸುವ ಆಕ್ಷನ್ ಸೀನ್‌ಗಳನ್ನೇ ಭರ್ತಿಯಾಗಿ ಟ್ರೇಲರ್‌ನಲ್ಲಿ ತುಂಬಿದ್ದ ನಿರ್ದೇಶಕರು, ಸಿನಿಮಾದಲ್ಲಿ ಇನ್ನೂ ಏನೆನೆಲ್ಲ ಹೇಳಿರಬಹುದು ಎಂಬ ಕುತೂಹಲ ಸಿನಿ ಪ್ರೀಯರಲ್ಲಿ ಇದೆ. ಕರ್ನಾಟಕದಲ್ಲಿ ಮುಂಗಡ ಬುಕಿಂಗ್‌ನಲ್ಲಿಯೂ ಈ ಸಿನಿಮಾ ಸದ್ದು ಮಾಡಿದ್ದು,
ಬೆಂಗಳೂರೊಂದರಲ್ಲಿಯೇ ಮಾರ್ಟಿನ್ ಸಿನಿಮಾಕ್ಕೆ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಈ ಸಿನಿಮಾ 500 ಪ್ಲಸ್ ಶೋಗಳನ್ನು ಗಿಟ್ಟಿಸಿಕೊಂಡಿದೆ. ಗುರುವಾರ ಮಧ್ಯರಾತ್ರಿ 1:15ರಿಂದಲೇ ಶೋಗಳು ಆರಂಭವಾಗಿದೆ.
ಹೈದರಾಬಾದ್‌ನಲ್ಲಿ 150 ಶೋಗಳು ಮಾರ್ಟಿನ್‌ಗೆ ಸಿಕ್ಕಿದ್ದು, ಚೆನ್ನೈ,150 ಶೋಗಳಿವೆ. ಚೆನ್ನೈ, ಮುಂಬೈನಲ್ಲಿಯೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಮಾರ್ಟಿನ್ ಸಿನಿಮಾ ಬಿಡುಗಡೆ ಆಗಿದೆ. ಸರಿಸುಮಾರು 100 ಕೋಟಿಯ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು ಒಟ್ಟಾರೆಯಾಗಿ 1 ಕೋಟಿ ಮುಂಗಡ ಟಿಕೆಟ್ ಮಾರಾಟದಿಂದಲೇ ಬಂದಿದೆ ಎನ್ನಲಾಗಿದೆ.