image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಿರ್ದೇಶಕರ ಸಂಘಕ್ಕೆ ನೃತ್ಯ ನಿರ್ದೇಶಕರ ಸಂಘದ ಪದಾಧಿಕಾರಿಗಳ ಬೇಟಿ...

ನಿರ್ದೇಶಕರ ಸಂಘಕ್ಕೆ ನೃತ್ಯ ನಿರ್ದೇಶಕರ ಸಂಘದ ಪದಾಧಿಕಾರಿಗಳ ಬೇಟಿ...

ಬೆಂಗಳೂರು: ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘಕ್ಕೆ ಇತ್ತೀಚೆಗೆ ಆಯ್ಕೆಯಾಗಿರುವ ಅಧ್ಯಕ್ಷರಾದ ಮುರಳಿ ವಿ. ಉಪಾಧ್ಯಕ್ಷರಾದ ಕುಮಾರ್ ಎಸ್(ಬಲದೇವ್, ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ರಾಮಮೂರ್ತಿ ಜಿ, ಸಹಕಾರ್ಯದರ್ಶಿ ಸಂತೋಷ್ ಎಸ್, ಲಕ್ಷ್ಮಣ್ ಜಿ, ಖಜಾಂಚಿಗಳಾದ ಸತೀಸ್ ಎಸ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಇಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಆಗಮಿಸಿ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರನ್ನು ಗೌರವಿಸಿ ನಂತರ ಚಿತ್ರರಂಗದ ಅಭಿವೃದ್ಧಿ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ  ಮಾತಾಡಿದ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್  ಅವರು ಎರಡು ಸಂಘದ ಬಾಂಧವ್ಯದ ಕುರಿತು ಮತ್ತು ಚಿತ್ರರಂಗದ ಏಳಿಗೆಯ ಕುರಿತು ಮಾತಾನಾಡಿ ಚಿತ್ರರಂಗದ ಬೆಳವಣಿಗೆಯ ದೃಷ್ಠಿಯಿಂದ ಜೊತೆ ಸೇರಿ ಕಾರ್ಯ ನಿರ್ವಹಿಸೋಣವೆಂದು  ಭರವಸೆಯಿತ್ತರು. 

ನಿರ್ದೇಶಕರ ಸಂಘದ ಉಪಾಧ್ಯಕ್ಷರಾದ ಟಾಪ್ ಸ್ಟಾರ್ ರೇಣು ಕುಮಾರ್, ಕಾರ್ಯದರ್ಶಿಗಳಾದ ಆರ್ ಶಿವಶಂಕರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಜಿತೇಂದ್ರ್ ಜೋಸೈಮನ್ ಅವರುಗಳು ಭಾಗಿಯಾಗಿ ನೂತನವಾಗಿ ಆಯ್ಕೆಯಾಗಿರುವ ನೃತ್ಯ ನಿರ್ದೇಶಕರ ಸಂಘದ ಪದಾದಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರ ಸಂಘದ ವತಿಯಿಂದ ಹೊಸದಾಗಿ ಚುನಾಯಿತರಾಗಿರುವ ನೃತ್ಯ ನಿರ್ದೇಶಕರ ಸಂಘದ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

Category
ಕರಾವಳಿ ತರಂಗಿಣಿ