ಧರ್ಮಸ್ಥಳ: ತುಳುನಾಡಿನ ದೈವ ಆರಾಧನೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ‘ಶ್ರೀಗಣ’ ಕಿರುಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಜೂನ್ 9ರಂದು ಬಿಡುಗಡೆಗೊಳಿಸಿದರು. ಕಿರುಚಿತ್ರವನ್ನು ವೀಕ್ಷಿಸಿದ ಪೂಜ್ಯ ಹೆಗ್ಗಡೆ ದಂಪತಿಗಳು, ತುಳುನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ದೈವ ಆರಾಧನೆಯ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ ಯುವಕರ ಸೃಜನಶೀಲತೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ ಕಲಾಕೇಂದ್ರದ ಪೋಷಕರು ಸೋನಿಯಾ ಯಶೋವರ್ಮ ಅವರು ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಸುಮಾರು 15 ನಿಮಿಷಗಳ ಈ ಕಿರುಚಿತ್ರವು ಯುವಕರು ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದು, ದೈವ ಆರಾಧನೆಯ ಹಿನ್ನೆಲೆಯನ್ನು ಒಳಗೊಂಡಿದೆ.
ಈ ಚಿತ್ರಕ್ಕೆ ಕಾರ್ತಿಕ್ ಸುಬ್ರಹ್ಮಣ್ಯ ನಿರ್ಮಾಪಕರಾಗಿದ್ದು, ನೂತನ ಅಮೀನ್ ರಚನೆ ಹಾಗೂ ನಿರ್ದೇಶನವನ್ನು, ಸುಜಿತ್ ಸೂರ್ಯ ಕಥೆ ಮತ್ತು ಸಂಭಾಷಣೆಯನ್ನು ನಿರ್ವಹಿಸಿದ್ದಾರೆ. ಭೂಷಣ್ ಪೂಜಾರಿ ಸಂಗೀತ ಸಂಯೋಜನೆ ಮತ್ತು ಸಮರ್ಥನ್ ರಾವ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗಗನ್ ರಾಜ್ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ರೋಹಿತ್ ಅಭಿನಯಿಸಿದ್ದು, ಕಾರ್ತಿಕ್, ಶೋಬಿತ್, ಕಿರಣ್, ಜಯರಾಮ್ ಮತ್ತು ರಾಜಾರಾಮ್ ಮೊದಲಾದವರು ನಟಿಸಿದ್ದಾರೆ. ಸುನಿಲ್ ಶೆಟ್ಟಿ ಕಲ್ಕೊಪ್ಪ ಹಾಗೂ ಯಶವಂತ್ ಬೆಳ್ತಂಗಡಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಕಿರುಚಿತ್ರವು ಸದ್ಯ ‘ಕುಕ್ಕೆಶ್ರಿ ಕ್ರೀಯೇಷನ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.