image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆವಿಎನ್ ನಿರ್ಮಾಣದ ಬಹುನಿರೀಕ್ಷಿತ ಬಾಲನ್ ದಿ ಬಾಯ್ ಜೂನ್ 19ಕ್ಕೆ ಬಿಡುಗಡೆ

ಕೆವಿಎನ್ ನಿರ್ಮಾಣದ ಬಹುನಿರೀಕ್ಷಿತ ಬಾಲನ್ ದಿ ಬಾಯ್ ಜೂನ್ 19ಕ್ಕೆ ಬಿಡುಗಡೆ

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಮಲಯಾಳಂ ಸಿನಿಮಾ 'ಬಾಲನ್ ದಿ ಬಾಯ್' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಜೂನ್ 19ಕ್ಕೆ ಈ ಚಿತ್ರವು ಮಲಯಾಳಂ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

​ಕೆವಿಎನ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ್ ಅವರು ಈ ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದು, ಇದೇ ಮೇ 14ರಂದು ಆರಂಭವಾಗಲಿರುವ ಪ್ರತಿಷ್ಠಿತ ಕಾನ್ಸ್ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಮಹತ್ವದ ಬೆಳವಣಿಗೆಯ ನಡುವೆಯೇ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ.

'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ನಿರ್ದೇಶನ ಹಾಗೂ 'ಆವೇಶಮ್' ಚಿತ್ರದ ಖ್ಯಾತಿಯ ಜಿತು ಮಾಧವನ್ ಅವರ ಕಥೆ ಈ ಚಿತ್ರಕ್ಕಿರುವುದರಿಂದ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿದೆ. 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ತಾಂತ್ರಿಕ ತಂಡವೇ ಇಲ್ಲಿಯೂ ಕಾರ್ಯನಿರ್ವಹಿಸಿದ್ದು, ಶೈಜು ಖಾಲಿದ್ ಅವರ ಛಾಯಾಗ್ರಹಣ, ವಿವೇಕ್ ಹರ್ಷನ್ ಅವರ ಸಂಕಲನ ಹಾಗೂ ಸುಶಿನ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕಿದೆ. ಅಜಯನ್ ಚಾಲಿಸ್ಸೆರಿ ಅವರ ನಿರ್ಮಾಣ ವಿನ್ಯಾಸ ಹಾಗೂ ನಟ ಗಣಪತಿ ಅವರ ಕಾರ್ಯಕಾರಿ ನಿರ್ಮಾಣ ಮತ್ತು ಕಾಸ್ಟಿಂಗ್ ಜವಾಬ್ದಾರಿಯಲ್ಲಿ ಸಿನಿಮಾ ಸಿದ್ಧಗೊಂಡಿದೆ.

Category
ಕರಾವಳಿ ತರಂಗಿಣಿ