image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಿತ್ರ ಮೇ 8 ರಂದು ಬಿಡುಗಡೆಯಾಗಲಿದೆ​ಯುವ ನಿರ್ದೇಶಕ ಪ್ರಸಾದ್ ಪುತ್ತೂರು ನಿರ್ದೇಶನದ 'ಮಂಗಮಾಯ'

ಚಿತ್ರ ಮೇ 8 ರಂದು ಬಿಡುಗಡೆಯಾಗಲಿದೆ​ಯುವ ನಿರ್ದೇಶಕ ಪ್ರಸಾದ್ ಪುತ್ತೂರು ನಿರ್ದೇಶನದ 'ಮಂಗಮಾಯ'

ಮಂಗಳೂರು: ಪುತ್ತೂರು ಬ್ರದರ್ಸ್ ಎಂಟರ್ಟೈನ್‌ಮೆಂಟ್ ರವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಚಲನಚಿತ್ರ "ಮಂಗಮಾಯ" ಇದೇ ಮೇ 8 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ನಿರ್ದೇಶಕ ಪ್ರಸಾದ್ ಕೆ.ಎಸ್ ತಿಳಿಸಿದರು. 

​ನಗರದ ಪತ್ತಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ ಕಥಾಹಂದರ ಹೊಂದಿದ್ದು, ಸಂಪೂರ್ಣವಾಗಿ ಒಂದು ದಿನದಲ್ಲಿ ನಡೆಯುವ ಕಥೆಯಾಗಿದೆ. ವಿಶೇಷವೆಂದರೆ, ಚಿತ್ರದ ಯಾವುದೇ ಕಲಾವಿದರಿಗೆ ಮೇಕಪ್ ಬಳಸಲಾಗಿಲ್ಲ ಮತ್ತು ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. 43 ದಿನಗಳ ಕಾಲ ಒಂದೇ ಹಂತದಲ್ಲಿ (single schedule), ಒಂದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ಮತ್ತೊಂದು ವಿಶೇಷತೆಯಾಗಿದೆ ಎಂದರು. 
​ಚಿತ್ರದ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಕರಾವಳಿ ಭಾಗದವರೇ ಆಗಿರುವುದರಿಂದ, ಈ ಭಾಗದ ಹಲವಾರು ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ನೀಡಲಾಗಿದೆ. ಚಿತ್ರದಲ್ಲಿ ಕರಾವಳಿ ಕನ್ನಡದ ಸೊಗಡನ್ನು ಬಳಸಲಾಗಿದ್ದು, ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಚಿತ್ರದಲ್ಲಿ ರಂಜನ್ ಶೆಟ್ಟಿ, ರಾಧೇಶ್ ಶೆಣೈ, ಪ್ರಕಾಶ್ ಶೆಣೈ, ಪ್ರಸನ್ನ ಪುತ್ತೂರು, ಮಹಮ್ಮದ್ ಹನೀಫ್, ಅಕ್ಷತ್ ಅಮಿನ್, ಚಂದನ್ ಕುಮಾರ್, ಬಿ. ಅರುಣ್ ಶೆಣೈ, ಚೇತನ್ ಪುತ್ತೂರು, ವಿಜಯಲಕ್ಷ್ಮಿ ಎಮ್., ಮಂಜುನಾಥ್ ಎಂ.ಎನ್., ಸಿದ್ದು ಪ್ರಸನ್ನ, ನಿತೇಶ್ ಅಗರ್ವಾಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Category
ಕರಾವಳಿ ತರಂಗಿಣಿ