image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗು ಮುಗಿವಾ ಮೊದಲೇ ಮಧುರ ಭಾವಗಳ ಸಿಂಚನ: 'ಲವ್ ಸೀಸನ್ಸ್' ಚಿತ್ರದ ಮೊದಲ ಲಿರಿಕಲ್ ಸಾಂಗ್ ಅದ್ದೂರಿ ಬಿಡುಗಡೆ!

ನಗು ಮುಗಿವಾ ಮೊದಲೇ ಮಧುರ ಭಾವಗಳ ಸಿಂಚನ: 'ಲವ್ ಸೀಸನ್ಸ್' ಚಿತ್ರದ ಮೊದಲ ಲಿರಿಕಲ್ ಸಾಂಗ್ ಅದ್ದೂರಿ ಬಿಡುಗಡೆ!

ಒಂದು ವಿಭಿನ್ನ ಪ್ರೇಮ ಕಥನದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ 'ಲವ್ ಸೀಸನ್ಸ್' ಚಿತ್ರದ ಮ್ಯೂಸಿಕಲ್ ಹಂಗಾಮಾ ಅಧಿಕೃತವಾಗಿ ಶುರುವಾಗಿದೆ. ಕೃತ್ವಿಕ್ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ಹಾಡು 'ಮಳೆಯಾಗೋ ಮೊದಲೇ' ಇದೀಗ ಎನ್‌.ಆರ್ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಕೇಳುಗರ ಮನಗೆಲ್ಲುತ್ತಿದೆ. 'ಕಾಂತಾರ' ಖ್ಯಾತಿಯ ಸಾಹಿತಿ ಪ್ರಮೋದ್ ಮರವಂತೆ ಅವರ ಲೇಖನಿಯಲ್ಲಿ ಮೂಡಿಬಂದಿರುವ "ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ, ನಗು ಮುಗಿವಾ ಮೊದಲೇ ಹೊಸ ಖುಷಿಯ ಕೊಡುವೆ" ಎಂಬ ಮೋಹಕ ಸಾಲುಗಳು ಪ್ರೇಮಿಗಳ ಲೋಕಕ್ಕೆ ಹೊಸ ಸ್ಪರ್ಶ ನೀಡಿವೆ.

​ಸಂಗೀತ ಮಾಂತ್ರಿಕ ವೀರ್ ಸಮರ್ಥ್ ಸಂಯೋಜಿಸಿರುವ ಈ ಗೀತೆಗೆ ಬಾಲಿವುಡ್‌ನ ಸ್ಟಾರ್ ಗಾಯಕ ಅರ್ಮಾನ್ ಮಲಿಕ್ ಹಾಗೂ 'ಸರೆಗಮಪ' ಸೀಸನ್ 10ರ ಖ್ಯಾತ ಗಾಯಕಿ ಪ್ರಜ್ಞಾ ಮರಾಠೆ ದನಿಯಾಗಿದ್ದು, ಹಾಡಿನ ಮಾಧುರ್ಯವನ್ನು ಇಮ್ಮಡಿಗೊಳಿಸಿದ್ದಾರೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಿಸಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ಮಿಂಚಿದ್ದು, ಅವರಿಗೆ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಸಾಥ್ ನೀಡಿದ್ದಾರೆ. ಕೆ. ಕಲ್ಯಾಣ್ ಅವರ ಸಾಹಿತ್ಯ, ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ ಹಾಗೂ ಮಂಡ್ಯ ರಮೇಶ್, ರಾಜೇಶ್ ನಟರಂಗ ಅವರಂತಹ ಅನುಭವಿ ಕಲಾವಿದರ ತಾರಾಗಣವಿರುವ ಈ ಚಿತ್ರವು ಸದ್ಯ ಈ ಮೆಲೋಡಿ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ.

Category
ಕರಾವಳಿ ತರಂಗಿಣಿ