image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಪ್ರಿಲ್ 24ಕ್ಕೆ ತುಳುನಾಡಿನಾದ್ಯಂತ ದೇವ್‌ ದಾಸ್ ನ ಲೀಲಾ ಸಿನೆಮಾ ಬಿಡುಗಡೆ

ಎಪ್ರಿಲ್ 24ಕ್ಕೆ ತುಳುನಾಡಿನಾದ್ಯಂತ ದೇವ್‌ ದಾಸ್ ನ ಲೀಲಾ ಸಿನೆಮಾ ಬಿಡುಗಡೆ

ಮಂಗಳೂರು: ಜಯಂತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ತೇಜೇಶ್ ಪೂಜಾರಿ ನಿರ್ದೇಶನದ  ತುಳು ಚಲನಚಿತ್ರ 'ದೇವ್‌ ದಾಸ್ ನ ಲೀಲಾ' ಇದೇ ಎಪ್ರಿಲ್ 24ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ.

​ಬಾಲಿವುಡ್‌ನಲ್ಲಿ  ನೃತ್ಯ ನಿರ್ದೇಶಕರಾಗಿ ಅನುಭವವಿರುವ ತೇಜೇಶ್ ಪೂಜಾರಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದು ಅವರ ದ್ವಿತೀಯ ನಿರ್ದೇಶನದ ಸಿನಿಮಾವಾಗಿದೆ. ದೀಪಕ್ ಸಿಂಗ್ ಮತ್ತು ಅಪ್ಪರಾ ಎಂಟರ್ಟೈನ್‌ಮೆಂಟ್ ಸಹಯೋಗದೊಂದಿಗೆ ಈ ಚಿತ್ರವನ್ನು ಜಯಂತಿ ಪ್ರೊಡಕ್ಷನ್ ನಿರ್ಮಿಸಿದೆ.
​ತುಳು ಚಿತ್ರರಂಗದ ಖ್ಯಾತ ನಟರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ ಮತ್ತು ನವೀನ್ ಡಿ. ಪಡೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್, ಅನುಷಾ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಬಾಲಿವುಡ್‌ನ ಖ್ಯಾತ ಗಾಯಕ ಶಾನ್ ಅವರು ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ಹಾಡಿರುವುದು ವಿಶೇಷ. ಇದರೊಂದಿಗೆ ದಿವ್ಯ ಕುಮಾರ್, ಶಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ ಮತ್ತು ಪ್ರಕಾಶ್ ಮಹದೇವನ್ ಧ್ವನಿ ನೀಡಿದ್ದಾರೆ.

ಸಂತೋಷ್ ಆಚಾರ್ಯ ಗುಂಪಲಜೆ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ ಹಾಗೂ ಸಾಯಿಶ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶನ ಮಾಡಿದ್ದಾರೆ.
​ಮಂಗಳೂರು, ಮುಡಿಪು, ಬಜ್ಪೆ ಮತ್ತು ಬೆಂಗಳೂರಿನಲ್ಲಿ ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಸಿನೆಮಾವು ಎಪ್ರಿಲ್ 24ರಂದು ಕರಾವಳಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿತು.

Category
ಕರಾವಳಿ ತರಂಗಿಣಿ