image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಕಾ ಅವತಾರಕ್ಕಾಗಿ ಅಲ್ಲು ಅರ್ಜುನ್ ಕಠಿಣ ಪರಿಶ್ರಮ: ಐಕಾನ್ ಸ್ಟಾರ್ ಲುಕ್ ಗೆ ಹಾರ್ದಿಕ್ ಪಾಂಡ್ಯ ಫಿದಾ!

ರಾಕಾ ಅವತಾರಕ್ಕಾಗಿ ಅಲ್ಲು ಅರ್ಜುನ್ ಕಠಿಣ ಪರಿಶ್ರಮ: ಐಕಾನ್ ಸ್ಟಾರ್ ಲುಕ್ ಗೆ ಹಾರ್ದಿಕ್ ಪಾಂಡ್ಯ ಫಿದಾ!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಇದೀಗ ಮತ್ತೊಂದು ಬೃಹತ್ ಪ್ರಾಜೆಕ್ಟ್‌ಗೆ ಸಜ್ಜಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಹಾಗೂ ಬನ್ನಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ರಾಕಾ' ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ನಟನ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿರುವ ಅಲ್ಲು ಅರ್ಜುನ್ ಅವರ ಈ ಭಯಾನಕ ಮತ್ತು ವಿನೂತನ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ವಿಶೇಷವೆಂದರೆ, ಈ ವಿಶಿಷ್ಟ 'ರಾಕಾ' ಗೆಟಪ್‌ಗಾಗಿ ಅಲ್ಲು ಅರ್ಜುನ್ ಪ್ರತಿದಿನ ಬರೋಬ್ಬರಿ 3 ರಿಂದ 4 ಗಂಟೆಗಳ ಕಾಲ ಮೇಕಪ್ ಹಾಗೂ ತಯಾರಿಗೆ ಶ್ರಮ ಹಾಕುತ್ತಿದ್ದಾರೆ. ಸಿನಿಮಾ ಮೇಲಿನ ಅವರ ಈ ಅಚಲ ನಿಷ್ಠೆ ಮತ್ತು ಪ್ರತಿ ಪಾತ್ರಕ್ಕೂ ಅವರು ನೀಡುವ ಮಿತಿಮೀರಿದ ಪರಿಶ್ರಮಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದ ವೇಳೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು 'ರಾಕಾ' ಪೋಸ್ಟರ್‌ನಲ್ಲಿನ ಅಲ್ಲು ಅರ್ಜುನ್ ಅವರ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಅನ್ನು ಮೈದಾನದಲ್ಲಿ ರೀ-ಕ್ರಿಯೇಟ್ ಮಾಡುವ ಮೂಲಕ ಈ ಚಿತ್ರದ ಮೇಲಿನ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಫ್ಯಾಂಟಸಿ ಚಿತ್ರವು ಹಾಲಿವುಡ್ ಮಟ್ಟದ ತಾಂತ್ರಿಕತೆಯನ್ನು ಹೊಂದಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

Category
ಕರಾವಳಿ ತರಂಗಿಣಿ