image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೆಟ್ರೋ ಲುಕ್‌ನಲ್ಲಿ ಚಂದನ್ ಶೆಟ್ಟಿ ಕಮಾಲ್: ಟ್ರೇಲರ್ ಮೂಲಕ ಸಂಚಲನ ಮೂಡಿಸಿದ ಎಲ್ರ ಕಾಲೆಳಿಯತ್ತೆ ಕಾಲ ಏಪ್ರಿಲ್ 17ಕ್ಕೆ ತೆರೆಗೆ!

ರೆಟ್ರೋ ಲುಕ್‌ನಲ್ಲಿ ಚಂದನ್ ಶೆಟ್ಟಿ ಕಮಾಲ್: ಟ್ರೇಲರ್ ಮೂಲಕ ಸಂಚಲನ ಮೂಡಿಸಿದ ಎಲ್ರ ಕಾಲೆಳಿಯತ್ತೆ ಕಾಲ ಏಪ್ರಿಲ್ 17ಕ್ಕೆ ತೆರೆಗೆ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಗಾಯಕ ಚಂದನ್ ಶೆಟ್ಟಿ ಈಗ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬಂದಿರುವ "ಎಲ್ರ ಕಾಲೆಳಿಯತ್ತೆ ಕಾಲ" ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. 90ರ ದಶಕದ ರೆಟ್ರೋ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರವು ಇದೇ ಏಪ್ರಿಲ್ 17ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ರಾಜಗುರು ಹೊಸಕೋಟೆ ಕಥೆ ಬರೆದಿದ್ದಾರೆ. ರಂಗಭೂಮಿ ಹಿನ್ನೆಲೆಯ ಪ್ರತಿಭೆಗಳೇ ಈ ಚಿತ್ರದ ಬೆನ್ನೆಲುಬಾಗಿದ್ದು, ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಸಾಥ್ ನೀಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸುಜಯ್ ಶಾಸ್ತ್ರಿ, "ಚಂದನ್ ಶೆಟ್ಟಿ ಈ ಪಾತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ, ಪ್ರವೀಣ್-ಪ್ರದೀಪ್ ಅವರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕ ಚಂದನ್ ಶೆಟ್ಟಿ ಮಾತನಾಡಿ, "ಇದೊಂದು ಅದ್ಭುತವಾದ ಕಥೆ, ರಂಗಭೂಮಿ ಕಲಾವಿದರ ಜೊತೆ ಕೆಲಸ ಮಾಡಿ ಬಹಳಷ್ಟು ಕಲಿತಿದ್ದೇನೆ. ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವಂತಹ ಸುಂದರ ಚಿತ್ರವಿದು, ಚಿತ್ರಮಂದಿರದಲ್ಲೇ ನೋಡಿ ಬೆಂಬಲಿಸಿ" ಎಂದು ಮನವಿ ಮಾಡಿದ್ದಾರೆ. ಕೆ.ವಿ.ಎನ್ ಸಂಸ್ಥೆಯ ವಿತರಣೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಂಜು ಪಾವಗಡ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಕಾಲದ ಮಹತ್ವ ಸಾರುವ ಈ ಸಿನೆಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಿದೆ.

Category
ಕರಾವಳಿ ತರಂಗಿಣಿ