image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುತೂಹಲ ಕೆರಳಿಸಿದ ಅನುಷ್ಕಾ ಶೆಟ್ಟಿ - ಜಯಸೂರ್ಯ ನಟನೆಯ ಕಥನಾರ್ ಟ್ರೇಲರ್ ಬಿಡುಗಡೆ

ಕುತೂಹಲ ಕೆರಳಿಸಿದ ಅನುಷ್ಕಾ ಶೆಟ್ಟಿ - ಜಯಸೂರ್ಯ ನಟನೆಯ ಕಥನಾರ್ ಟ್ರೇಲರ್ ಬಿಡುಗಡೆ

ಬೆಂಗಳೂರು: ಮಲಯಾಳಂ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ 'ಕಥನಾರ್' ಚಿತ್ರದ ಅಧಿಕೃತ ಟ್ರೇಲರ್ ಅದ್ಧೂರಿಯಾಗಿ ಅನಾವರಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಈ ಚಿತ್ರದ ಕನ್ನಡ ಆವೃತ್ತಿಯ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಪ್ರತಿಷ್ಠಿತ 'ಶ್ರೀ ಗೋಕುಲಂ ಮೂವೀಸ್' ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಈ ಬೃಹತ್ ಚಿತ್ರವನ್ನು ನಿರ್ಮಿಸಿದ್ದಾರೆ. ಮಲಯಾಳಂನ ಖ್ಯಾತ ನಟ ಜಯಸೂರ್ಯ ಈ ಚಿತ್ರಕ್ಕಾಗಿ ತಮ್ಮ ವೃತ್ತಿಜೀವನದ ನಾಲ್ಕು ವರ್ಷಗಳನ್ನು ಮೀಸಲಿಟ್ಟಿರುವುದು ವಿಶೇಷ. ಇನ್ನು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದೀರ್ಘ ಕಾಲದ ನಂತರ ಬೆಳ್ಳಿ ಪರದೆಗೆ ಮರಳುತ್ತಿದ್ದಾರೆ.
ಟ್ರೇಲರ್‌ನಲ್ಲಿ ಕಂಡುಬರುವ ಅದ್ಭುತ ವಿಎಫ್‌ಎಕ್ಸ್ (VFX) ಮತ್ತು ಹಿನ್ನೆಲೆ ಸಂಗೀತ ನೋಡುಗರಿಗೆ ಹಾಲಿವುಡ್ ಚಿತ್ರಗಳ ಅನುಭವ ನೀಡುತ್ತಿದೆ. ಮಾಟ-ಮಂತ್ರ ಹಾಗೂ ಅತೀಂದ್ರಿಯ ಶಕ್ತಿಗಳ ಸುತ್ತ ಸಾಗುವ ಈ ಕಥೆಯಲ್ಲಿ ಜಯಸೂರ್ಯ ಕಥನಾರ್ ಎಂಬ ಪಾದ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ ಜೊತೆಗೆ ಬಹುಭಾಷಾ ನಟ ಪ್ರಭುದೇವ, ನಿತೀಶ್ ಭಾರದ್ವಾಜ್, ವಿನೀತ್ ಹಾಗೂ ಹರೀಶ್ ಉತ್ತಮನ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಚಿತ್ರಕ್ಕೆ ರೋಜಿನ್ ಥಾಮಸ್ ನಿರ್ದೇಶನ ಮಾಡಿದ್ದು, ಅವರೇ ವಿಎಫ್‌ಎಕ್ಸ್ ಮತ್ತು ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಅವರ ಛಾಯಾಗ್ರಹಣ ಹಾಗೂ ರಾಹುಲ್ ಸುಬ್ರಮಣ್ಯನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಒಟ್ಟು 15 ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ.

Category
ಕರಾವಳಿ ತರಂಗಿಣಿ