image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಗಾಡ್ ಪ್ರಾಮಿಸ್' ಚಿತ್ರಕ್ಕೆ ನಾಯಕಿಯಾದ ಮಲಯಾಳಂ ಬೆಡಗಿ ಜೂಹಿ ಜಯಕುಮಾರ್

'ಗಾಡ್ ಪ್ರಾಮಿಸ್' ಚಿತ್ರಕ್ಕೆ ನಾಯಕಿಯಾದ ಮಲಯಾಳಂ ಬೆಡಗಿ ಜೂಹಿ ಜಯಕುಮಾರ್

​ನಿರ್ದೇಶಕ ಸೂಚನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಗಾಡ್ ಪ್ರಾಮಿಸ್' ಚಿತ್ರದ ನಾಯಕಿಯನ್ನು ತಂಡ ಅಧಿಕೃತವಾಗಿ ಪರಿಚಯಿಸಿದೆ. ಕೇರಳ ಮೂಲದ ಪ್ರತಿಭಾನ್ವಿತ ನಟಿ ಜೂಹಿ ಜಯಕುಮಾರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

​ಈಗಾಗಲೇ ಮಲಯಾಳಂ ಚಿತ್ರರಂಗದ 'ಪವಿ ಕೇರ್ ಟೇಕರ್', 'ತಲೈವಾ ತಲೈವಿ' ಹಾಗೂ 'ಸುಮತಿ ಒಲವು' ಅಂತಹ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡಿರುವ ಜೂಹಿ ಅವರನ್ನು  ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ಕುಂದಾಪುರ ಹಾಗೂ ಬೆಂಗಳೂರಿನಲ್ಲಿ ನಡೆದ ಆನ್ ಲೈನ್ ಮತ್ತು ಆಫ್ ಲೈನ್ ಆಡಿಷನ್‌ನಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ಭಾಗವಹಿಸಿದ್ದರು. ಈ ಪೈಕಿ ಪಾತ್ರಕ್ಕೆ ಸೂಕ್ತವೆನಿಸಿದ ಜೂಹಿ ಅವರನ್ನು ವರ್ಕ್‌ಶಾಪ್ ನಡೆಸಿದ ಬಳಿಕ ಚಿತ್ರತಂಡ ಅಂತಿಮಗೊಳಿಸಿದೆ ಎಂದು ತಿಳಿಸಿದೆ.

​ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಜೂಹಿ ಜಯಕುಮಾರ್, "ಈ ಚಿತ್ರದಲ್ಲಿ ನನ್ನದು ಕೇವಲ ಮರ ಸುತ್ತುವ ಪಾತ್ರವಲ್ಲ, ಬದಲಿಗೆ ಅಭಿನಯಕ್ಕೆ ಹೆಚ್ಚು ಸ್ಕೋಪ್ ಇರುವಂತಹ ತೂಕದ ಪಾತ್ರವಾಗಿದೆ. ಹೊಸತನಕ್ಕೆ ತುಡಿಯುವ ಸೂಚನ್ ಶೆಟ್ಟಿ ಅವರ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ" ಎಂದು ತಿಳಿಸಿದ್ದಾರೆ.

​ಮಹೇಂದ್ರ ಶೆಟ್ಟಿ ಅವರ ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನ್ ಸಂಗೀತ ಹಾಗೂ ನವೀನ್ ಶೆಟ್ಟಿ ಅವರ ಸಂಕಲನವಿದೆ. ಈಗಾಗಲೇ ಶೇಕಡಾ 40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರಿಲ್ ಅಂತ್ಯಕ್ಕೆ ಬಾಕಿ ಚಿತ್ರೀಕರಣ ಮುಗಿಸಿ ಇದೇ ವರ್ಷ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

Category
ಕರಾವಳಿ ತರಂಗಿಣಿ