image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವರಲಕ್ಷ್ಮೀ - ರಾಗಿಣಿ ಕಾಂಬಿನೇಶನ್‌ನ ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಬಿಡುಗಡೆಗೆ ನಟಿ ಪ್ರೇಮಾ ಮತ್ತು ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಸಾಥ್!

ವರಲಕ್ಷ್ಮೀ - ರಾಗಿಣಿ ಕಾಂಬಿನೇಶನ್‌ನ ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಬಿಡುಗಡೆಗೆ ನಟಿ ಪ್ರೇಮಾ ಮತ್ತು ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಸಾಥ್!

ಚಲನಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾಗಳ ಸಂಖ್ಯೆ ವಿರಳವಾಗುತ್ತಿದ್ದು, ಆ ಕೊರತೆಯನ್ನು ನೀಗಿಸಲು ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ಸಿದ್ಧವಾಗಿದೆ. ನಟಿ ವರಲಕ್ಷ್ಮೀ ಶರತ್‌ಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಖ್ಯಾತ ನಟಿ ಪ್ರೇಮಾ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಮೊದಲ ಹಾಡನ್ನು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಅನಾವರಣಗೊಳಿಸಿದರು.
ಈ ಹಿಂದೆ ಪೂಜಾ ಗಾಂಧಿ ಅಭಿನಯದ ‘ಅನು’ ಮತ್ತು ‘ದಂಡು’ ಅಂತಹ ಚಿತ್ರಗಳನ್ನು ನೀಡಿದ್ದ ಸಂಜೀವ್ ಮೆಗೋಟಿ ಅವರು ಸುಮಾರು ಹತ್ತು ವರ್ಷಗಳ ನಂತರ ‘ಪೊಲೀಸ್ ಕಂಪ್ಲೈಂಟ್’ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಆ್ಯಕ್ಷನ್ ಜೊತೆಗೆ ಹಾರರ್-ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ನಾವು ಮಾಡಿದ ಕರ್ಮ ನಮ್ಮನ್ನು ಹೇಗೆ ಕಾಡುತ್ತದೆ ಎಂಬ ವಿಶಿಷ್ಟ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದ್ದು, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದರು.
ನಟಿ ರಾಗಿಣಿ ದ್ವಿವೇದಿ ಅವರು ಮಾತನಾಡಿ, ತಮ್ಮ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾ. ಇಲ್ಲಿ ಆ್ಯಕ್ಷನ್ ಮತ್ತು ಹಾರರ್ ಜೊತೆಗೆ ತಾಯಿ-ಮಗುವಿನ ಸಂಬಂಧದ ಎಮೋಷನಲ್ ಕಥೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಟ ಕೃಷ್ಣ ಸಾಯಿ ಅವರಿಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾವಾಗಿದ್ದು, ಚಿತ್ರದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಎ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆರೋಹಣ ಸುಧೀಂದ್ರ ಸಂಗೀತ ಹಾಗೂ ಬಿ.ಆರ್. ಛಾಯಾ ಅವರ ಧ್ವನಿಯಿದೆ. ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸದ್ಯ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡವು ಇದೇ ವರ್ಷದ ಮಧ್ಯಭಾಗದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Category
ಕರಾವಳಿ ತರಂಗಿಣಿ