image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಪರೇಷನ್ ಡ್ರೀಮ್ ಥಿಯೇಟರ್ 666: ಏಜೆಂಟ್ ಕಾವೇರಿಯಾಗಿ ಅದಿತಿ ಬಾಲನ್ ಎಂಟ್ರಿ!

ಆಪರೇಷನ್ ಡ್ರೀಮ್ ಥಿಯೇಟರ್ 666: ಏಜೆಂಟ್ ಕಾವೇರಿಯಾಗಿ ಅದಿತಿ ಬಾಲನ್ ಎಂಟ್ರಿ!

ಬೆಂಗಳೂರು: ಹೇಮಂತ್ ರಾವ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ತಮಿಳಿನ ಸೂಪರ್ ಹಿಟ್ 'ಅರುವಿ' ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅದಿತಿ ಬಾಲನ್ ಈಗ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರದಲ್ಲಿ ಅದಿತಿ ಬಾಲನ್ ಅವರು 'ಏಜೆಂಟ್ ಕಾವೇರಿ' ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 'ಕ್ಯಾಪ್ಟನ್ ಮಿಲ್ಲರ್', 'ಪಡವೆಟ್ಟು' ಚಿತ್ರಗಳ ಮೂಲಕ ಗಮನ ಸೆಳೆದಿರುವ ಇವರು, ಇದೀಗ ಕನ್ನಡದ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಪ್ರಮುಖ ಏಜೆಂಟ್ ಆಗಿ ನಟಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಈಗಾಗಲೇ ಈ ಚಿತ್ರದಲ್ಲಿ 'ಕರುನಾಡ ಚಕ್ರವರ್ತಿ' ಡಾ. ಶಿವರಾಜಕುಮಾರ್ 'ಏಜೆಂಟ್ ಪ್ರಕಾಶ್' ಆಗಿ ಕಾಣಿಸಿಕೊಂಡಿದ್ದಾರೆ. ಇದು ಡಾ. ರಾಜಕುಮಾರ್ ಅವರ ಐಕಾನಿಕ್ 'ಆಪರೇಷನ್ ಡೈಮಂಡ್ ರಾಕೆಟ್' ಚಿತ್ರದ ಪಾತ್ರಕ್ಕೆ ಸಲ್ಲಿಸುವ ಗೌರವವಾಗಿದೆ. ಇದರ ಬೆನ್ನಲ್ಲೇ 'ನಟರಾಕ್ಷಸ' ಡಾಲಿ ಧನಂಜಯ್ 'ಏಜೆಂಟ್ ಶಂಕರ್' ಆಗಿ ತಂಡ ಸೇರಿಕೊಂಡಿದ್ದರು. ಈಗ ಅದಿತಿ ಬಾಲನ್ ಅವರ ಸೇರ್ಪಡೆಯಿಂದ ಚಿತ್ರದ ತಾರಾಗಣ ಮತ್ತಷ್ಟು ಬಲಿಷ್ಠವಾಗಿದೆ.

ನಿರ್ದೇಶನ: ಹೇಮಂತ್ ರಾವ್
ನಿರ್ಮಾಣ: ಡಾ. ವೈಶಾಖ್ ಜೆ. ಗೌಡ (ವೈಶಾಖ್ ಜೆ ಫಿಲಂಸ್)ಸಂಗೀತ: ಚರಣ್ ರಾಜ್
ಛಾಯಾಗ್ರಹಣ: ಅದ್ವೈತ ಗುರುಮೂರ್ತಿ. ತಾರಾಗಣದಲ್ಲಿ ಶಿವರಾಜಕುಮಾರ್, ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಇದ್ದಾರೆ.
ಸದ್ಯ ಐದನೇ ಹಂತದ ಚಿತ್ರೀಕರಣ ಪೂರೈಸಿರುವ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದೆ. ಆಕ್ಷನ್, ಡ್ರಾಮಾ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ಈ ವರ್ಷವೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

Category
ಕರಾವಳಿ ತರಂಗಿಣಿ