image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯ ಗ್ಯಾಂಗ್‌ಸ್ಟರ್ ಸಾಮ್ರಾಜ್ಯಕ್ಕೆ ವಸಿಷ್ಠ ಸಿಂಹ ಎಂಟ್ರಿ: ಅದ್ದೂರಿಯಾಗಿ

ಕರಾವಳಿಯ ಗ್ಯಾಂಗ್‌ಸ್ಟರ್ ಸಾಮ್ರಾಜ್ಯಕ್ಕೆ ವಸಿಷ್ಠ ಸಿಂಹ ಎಂಟ್ರಿ: ಅದ್ದೂರಿಯಾಗಿ

ಮಂಗಳೂರು: ಸ್ಯಾಂಡಲ್‌ವುಡ್‌ನ ‘ಸಿಂಹ’ ವಸಿಷ್ಠ ಸಿಂಹ ಈಗ ಕರಾವಳಿಯ ಕಡಲತೀರದಲ್ಲಿ ಆರ್ಭಟಿಸಲು ಸಜ್ಜಾಗಿದ್ದಾರೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್ ಕುಮಾರ್ ಗೌಡ ನಿರ್ದೇಶನದ ಬಹುನಿರೀಕ್ಷಿತ ‘ಕಡಲ್ ಕೋಟೆ’ ಚಿತ್ರಕ್ಕೆ ಸುರತ್ಕಲ್‌ನ ಶ್ರೀ ಕ್ಷೇತ್ರ ಗಣೇಶಪುರದ ಮಹಾ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಅದ್ಧೂರಿ ಚಾಲನೆ ಸಿಕ್ಕಿದೆ.

ಚಿತ್ರದ ಮೊದಲ ದೃಶ್ಯಕ್ಕೆ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಕ್ಲಾಪ್ ಮಾಡಿದರೆ, ಮಂಗಳೂರಿನ ಲೋಕಾಯುಕ್ತ ಎಸ್.ಪಿ. ಬಿ.ಪಿ. ದಿನೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ನಿವೃತ್ತ ಲೋಕಾಯುಕ್ತ ಕಮಿಷನರ್ ನಟರಾಜ್ ಹಾಗೂ ಬಿರುವೆರ್ ಕುಡ್ಲದ ಉದಯ್ ಪೂಜಾರಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರಂಜಿತ್ ಕುಮಾರ್ ಗೌಡ ಅವರ ಪ್ರಕಾರ, ಇದೊಂದು ಪಕ್ಕಾ ಕಮರ್ಷಿಯಲ್ ಗ್ಯಾಂಗ್‌ಸ್ಟರ್ ಸಿನಿಮಾ. ಹಾರ್ಬರ್ ಮೇಲೆ ಹಿಡಿತ ಸಾಧಿಸಲು ನಡೆಯುವ ಸಂಘರ್ಷ, ಶೋಷಣೆ ಮತ್ತು ಹಣದ ಹಿಂದೆ ಬಿದ್ದ ಮನುಷ್ಯನ ಜೀವನದ ಏರಿಳಿತಗಳನ್ನು ಈ ಚಿತ್ರ ಒಳಗೊಂಡಿದೆ. ಮಂಗಳೂರು ಹಾರ್ಬರ್, ಉಡುಪಿ, ಸುರತ್ಕಲ್ ಮತ್ತು ಬೇಂಗ್ರೆ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. "ಬೆಂಕಿಯಲ್ಲಿ ಅರಳಿದ ಹೂವಿನಂತೆ" ನಾಯಕ ಹೇಗೆ ಎದ್ದು ಬರುತ್ತಾನೆ ಎಂಬುದು ಚಿತ್ರದ ಜೀವಾಳ.

ಈ ಚಿತ್ರದ ಬರವಣಿಗೆ ತುಂಬಾ ನೈಜವಾಗಿದೆ. ಕರಾವಳಿಯ ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಹೆಣೆಯಲಾಗಿದೆ. ಬಹಳ ದಿನಗಳ ನಂತರ ನಾನು ಪಕ್ಕಾ ಮಾಸ್ ಪಾತ್ರವೊಂದನ್ನು ಮಾಡುತ್ತಿದ್ದೇನೆ ಎಂದರು ನಾಯಕ ನಟ ವಶಿಷ್ಟ ಸಿಂಹ. ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಸುಷ್ಮಿತಾ ಭಟ್ ಸಾಥ್ ನೀಡುತ್ತಿದ್ದಾರೆ.

ವಿಶೇಷವೆಂದರೆ, ಹಿರಿಯ ನಟ ರವಿಶಂಕರ್ ಇಲ್ಲಿ ಕಥೆಯ 'ಸೂತ್ರಧಾರ'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ತಾರಾ ಅನುರಾಧಾ, ಸ್ವರಾಜ್ ಶೆಟ್ಟಿ, ಯಶ್ ಶೆಟ್ಟಿ, ಬಲ ರಾಜವಾಡಿ ತಾರಾಗಣದಲ್ಲಿದ್ದಾರೆ. ಸಂಗೀತ ಶಶಾಂಕ್ ಶೇಷಗಿರಿ, ಛಾಯಾಗ್ರಹಣ ವೀನಸ್ ನಾಗರಾಜ ಮೂರ್ತಿ, ಸಂಕಲನ ಪವನ್ ಗೌಡ, ಕಾರ್ಯಕಾರಿ ನಿರ್ಮಾಪಕ: ಪವನ್ ಕುಮಾರ್ ಉಡುಪಿ. 

Category
ಕರಾವಳಿ ತರಂಗಿಣಿ