image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೆಲೆಬ್ರಿಟಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್...ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಸೆಲೆಬ್ರಿಟಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್...ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಗೌರಿ ಆರ್ಟ್ಸ್ ಸಂಸ್ಥೆಯ ಚೊಚ್ಚಲ ಚಿತ್ರ 'ಸೆಲೆಬ್ರಿಟಿ' ಟೈಟಲ್ ಲಾಂಚ್ ಇವೆಂಟ್  ಅದ್ದೂರಿಯಾಗಿ ನಡೆಯಿತು.ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. 

ಟೈಟಲ್ ಲಾಂಚ್ ಬಳಿಕ ಸುದೀಪ್ ಮಾತನಾಡಿ, ನನಗೆ ಟೀಸರ್ ತುಂಬಾ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಬ್ಯೂಟಿಫುಲ್ ಆಗಿದೆ. ವಿಜಯ್ ಮ್ಯೂಸಿಕ್ ಚೆನ್ನಾಗಿದೆ. ಇವ್ರು ಅರ್ಜುನ್ ಜನ್ಯ ಶಿಷ್ಯ. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಮಾತಾಡೋ ತಾರೆಯ ಕಂಡ ಹಾಗೇ ಹಾಡು ಹಾಡಿರುವುದು ಇವರೇ. ಇವ್ರ ವಾಯ್ಸ್ ಬ್ಯೂಟಿಫುಲ್‌ ಆಗಿದೆ. ಟೀಸರ್ ಚೆನ್ನಾಗಿ ತೆಗೆದಿದ್ದಾರೆ. ಹೀರೋ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ನೀವು ಮಾಡಿರುವ ಡ್ಯಾನ್ಸ್ ನಮಗೆ ಮಾಡಲು ಹೇಳಿದರೆ ನಾವು ಭಯಪಡುತ್ತೇವೆ. ನಮಗೆ ಅಷ್ಟೆಲ್ಲಾ ಬರಲ್ಲ. ನಿಮಗೆ ಒಳ್ಳೆ ಕಲೆ ಇದೆ. ನಾನು ಇಲ್ಲಿಗೆ ಬರಲು ಮೂಲ ಕಾರಣ ಮಹೇಶ್ ಅಣ್ಣ. ಬಹಳ ವರ್ಷಗಳ ಪರಿಚಯ. ನನಗೆ ಬಹಳ ಬೇಕಾದ ವ್ಯಕ್ತಿ. ಸೆಲೆಬ್ರೆಟಿ ಸಿನಿಮಾ ಇವತ್ತು ಇಲ್ಲಿ ಲಾಂಚ್ ಆಗಿದೆ. ಒಂದು ಸಿನಿಮಾ ಮಾಡುವುದು ಇಸಿ ಕೆಲಸವಾದರೆ, ಅದು ಬೆಳೆಯಬೇಕು ಎಂದರೆ ಅದಕ್ಕೆ ನಿಮ್ಮ ಸಹಕಾರ ಬೇಕು. ಟೆಕ್ನಿಕಲ್ ಚಿತ್ರ ಎಕ್ಸಿಲೆಂಟ್ ಆಗಿದೆ. ಸಿನಿಮಾದಲ್ಲಿ ಇರುವ ಪ್ರತಿಯೊಬ್ಬರಿಗೂ ಒಳ್ಳೆದಾಗಲಿ ಎಂದರು.

ನಾಯಕ ಅಶ್ವಿನ್ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಸುದೀಪ್ ಸರ್ ಎದುರು ಮಾತಾಡ್ತಿದ್ದೇನೆ. ಏನ್ ಮಾತಾಡ್ಬೇಕು ಗೊತ್ತಾಗುತ್ತಿಲ್ಲ. ಅವರಿಗೆ ಧನ್ಯವಾದ. ಚಿಕ್ಕ ವಯಸ್ಸಿನಿಂದ ಕನಸು ಇಟ್ಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ ಎಂದರು.

ನಮಸ್ಕಾರ ಕರ್ನಾಟಕ ಚೆನ್ನಾಗಿ ಇದ್ದೀರಾ ಎಂದು ಕನ್ನಡದಲ್ಲಿಯೇ ಮಾತು ಶುರು ಮಾಡಿದ ಹಿರಿಯ ನಟಿ ಸಂಗೀತ,  ನನಗೆ ತುಂಬಾ ಸಂತೋಷವಾಗ್ತಿದೆ.‌ ನಾನು ಇಷ್ಟು ವರ್ಷವಾದ್ಮೇಲೆ ಸೆಲೆಬ್ರಿಟಿ ಸಿನಿಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದೇನೆ. ನಿರ್ದೇಶಕ ಕಿರಣ್ ಅವರು, ಮಹೇಶ್ ಸರ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು. ಸುದೀಪ್ ಅವರ ಅಭಿಮಾನಿ ನಾನು. ಹೀರೋ ತುಂಬಾ ಹಾರ್ಡ್ ವರ್ಕ್ ಮಾಡ್ತಾರೆ.‌ ಈ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದರು.

ಸೆಲೆಬ್ರಿಟಿ ಸಿನಿಮಾವನ್ನು ಗೌರಿ ಆರ್ಟ್ಸ್ ಬ್ಯಾನರ್ ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಹಾರ್ಡ್ ವರ್ಕ್ ಮಾಡಿ ಅಶ್ವಿನ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಟೈಟಲ್ ಟೀಸರ್ ನೋಡಿದ್ರೆ ಗೊತ್ತಾಗುತ್ತದೆ. ಡ್ಯಾನ್ಸ್, ಫೈಟಿಂಗ್ ನಲ್ಲಿಯೂ ಅಶ್ವಿನ್ ಧೂಳ್ ಎಬ್ಬಿಸಿದ್ದಾರೆ. 

ಕಿರಣ್ ವಿಶ್ವನಾಥ್ ಸೆಲೆಬ್ರಿಟಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾಯಕಿಯಾಗಿ ನಟಿ ಪ್ರಿಯಾಂಕಾ ಆಚಾರ್ ಅಭಿನಯಿಸುತ್ತಿದ್ದು, ಯಾರೇ ನೀನು ಚೆಲುವೆ ಖ್ಯಾತಿಯ ಸಂಗೀತ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಒಂದೊಳ್ಳೆ ತಂಡ, ಒಂದು ಅದ್ಭುತ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಈ ಚಿತ್ರವನ್ನು ಸುರೇಶ್ ಬಾಬು ಸಿಬಿ ಪ್ರೆಸೆಂಟ್ ಮಾಡುತ್ತಿದ್ದಾರೆ.

ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿದೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಸಾಂಗ್ಸ್ ಮೂಡಿ ಬರಲಿದೆ.

 

Category
ಕರಾವಳಿ ತರಂಗಿಣಿ