image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಬಿರ್ದ್ ದ ಕಂಬಳ' ಚಿತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು ಅಭಿನಯಿಸಿರುವ ದೃಶ್ಯಕ್ಕೆ ಕತ್ತರಿ ಹಾಕಲು ಒತ್ತಡ ಬಂದಿತ್ತು - ರಾಜೇಂದ್ರ ಸಿಂಗ್ ಬಾಬು

'ಬಿರ್ದ್ ದ ಕಂಬಳ' ಚಿತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು ಅಭಿನಯಿಸಿರುವ ದೃಶ್ಯಕ್ಕೆ ಕತ್ತರಿ ಹಾಕಲು ಒತ್ತಡ ಬಂದಿತ್ತು - ರಾಜೇಂದ್ರ ಸಿಂಗ್ ಬಾಬು

ಮಂಗಳೂರು: ಕಂಬಳ ಕುರಿತ "ಬಿರ್ದ್ ದ ಕಂಬಳ" ಸಿನಿಮಾದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ದೃಶ್ಯಕ್ಕೆ ಕತ್ತರಿ ಹಾಕಲು ಒತ್ತಡ ಬಂದಿತ್ತು ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.

ಇಂದು ಸಂಜೆ ನಡೆದ ಸಿನಿಮಾದ ಹಾಡು ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ವಿಷಯದಲ್ಲಿ ವಿವಾದ ಆಗುತ್ತಿದ್ದ ಸಂದರ್ಭದಲ್ಲಿ ಹೆಗ್ಗಡೆ ಅವರ ದೃಶ್ಯ ತೆಗೆದುಹಾಕಬೇಕು ಎಂದು‌ ಕೆಲವರು ಒತ್ತಾಯಿಸಿದ್ದರು ಎಂದರು.
'ಸಿನಿಮಾ ಬೇರೆ, ರಾಜಕೀಯ ಬೇರೆ. ಚಿತ್ರಕ್ಕೆ ಬಳಸಿದ ದೃಶ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ' ಎಂದು ಹೇಳಿದ್ದೆ. ಹಾಗಾದರೆ ಬಿಡುಗಡೆ ಆಗುವಾಗ ಈ ದೃಶ್ಯ ಇರಬಾರದು ಎಂದು ಹೇಳಿದರು. ಅದಕ್ಕೂ ನಾನು ಒಪ್ಪಲಿಲ್ಲ' ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದರು.

ಗುಣಪಾಲ ಕಡಂಬರ ಮಾತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


'ಚಿತ್ರದ ಕೊನೆಯಲ್ಲಿ ಎರಡು ಕುಟುಂಬಗಳಿಗೆ ಬುದ್ದಿ ಹೇಳುವಾಗ ಪಾತ್ರಕ್ಕೆ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಪಾತ್ರ ನಿರ್ವಹಿಸಲು ಅವರು ಅತ್ಯಂತ ಸೂಕ್ತ ವ್ಯಕ್ತಿ ಆಗಿದ್ದರು. ಕೋಟಿ ಮೊತ್ತ ಕೊಟ್ಟರೂ ಈ‌ ಪಾತ್ರಕ್ಕೆ ಇಂಥ ವ್ಯಕ್ತಿ ಸಿಗುತ್ತಿರಲಿಲ್ಲ' ಎಂದು ಅವರು ಹೇಳಿದರು.  ಈ ಚಿತ್ರವನ್ನು ತುಳು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಮತ್ತು ಇಂಗ್ಲೀಷ್ ಬಾಷೆಗೆ ಡಬ್ ಮಾಡಿ ಜಗತ್ತಿಗೆ ಕಂಬಳವನ್ನು ತೋರಿಸಬೇಕೆನ್ನುವ ಆಸೆ ಇದೆ ಎಂದರು.  ಗುಣಪಾಲ ಮಾತನಾಡಿ 'ಚಿತ್ರದಲ್ಲಿ ಕಂಬಳದ ಮೂಲ ಸ್ವರೂಪಕ್ಕೆ ಯಾವುದೇ ತೊಂದರೆ ಆಗಬಾರದು' ಎಂದು ಹೇಳಿದ್ದೆ ಅದೇ ರೀತಿ ನಡೆದುಕೊಂಡಿದ್ದಾರೆ. ಚಿತ್ರ ಪ್ರತಿ ಹಂತದಲ್ಲೂ ನನ್ನ ಮಾರ್ಗದರ್ಶನ ಕೇಳಿದ್ದರು ಎಂದರು. ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, ಶಶಿರಾಜ್ ಕಾವೂರು, ಮೈಮ್ ರಾಮದಾಸ್, ದೇವಿಪ್ರಸಾದ್ ಶೆಟ್ಟಿ ಬೆಳಪು ಮುಂತಾದವರು ಚಿತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡರು.

Category
ಕರಾವಳಿ ತರಂಗಿಣಿ