ಉಜಿರೆ: ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಬಗ್ಯೆ ರೂಪಿಸಿದ ತುಳು ಚಲನಚಿತ್ರ “ಬಿರ್ದ್ದ ಕಂಬುಳ” (ಕನ್ನಡ : ವೀರ ಕಂಬಳ) ಫೆ. 27 ರಂದು ಬಿಡುಗಡೆಯಾಗಲಿದೆ ಎಂದು ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ರಾಜೇಂದ್ರಸಿAಗ್ ಬಾಬು ಧರ್ಮಸ್ಥಳದಲ್ಲಿ ತಿಳಿಸಿದ್ದಾರೆ. ಅವರು ಧರ್ಮಸ್ಥಳದಲ್ಲಿ ವಸಂತಮಹಲ್‌ನಲ್ಲಿ “ಬಿರ್ದ್ ದ ಕಂಬುಳ” ಚಲನಚಿತ್ರದ ಪ್ರಾಯೋಗಿಕ ಪ್ರದರ್ಶನದ ಬಳಿಕ ಮಾಹಿತಿ ನೀಡಿದರು. ತುಳು ರಂಗಭೂಮಿ ನಿರ್ದೇಶಕ ವಿಜಯ ಕೊಡಿಯಾಲಬೈಲ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆದಿತ್ಯ ನಾಯಕನಾಗಿ ನಟಿಸಿದ್ದಾರೆ.
ಖ್ಯಾತ ನಟರಾದ ಪ್ರಕಾಶ್‌ರಾಜ್, ರವಿಶಂಕರ್, ಆದಿತ್ಯ, ನಟಿ ರಾಧಿಕಾಚೇತನ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ನವೀನ್ ಡಿ. ಪಡೀಲ್, ಗೋಪಿನಾಥ ಭಟ್ ಮೊದಲಾದವರು ನಟಿಸಿದ್ದಾರೆ. ತುಳುನಾಡಿನ ಭವ್ಯಸಂಸ್ಕೃತಿ ಮತ್ತು ಹಿನ್ನೆಲೆಯನ್ನು ಪ್ರತಿಬಿಂಬಿಸುವ ಕಂಬಳದ ಬಗ್ಯೆ ಪರ, ವಿರೋಧ ಚರ್ಚೆ, ನ್ಯಾಯಾಲಯದಲ್ಲೂ ವಾದ-ವಿವಾದ, ರಾಜಕೀಯ ಪರ-ವಿರೋಧ ವಾಗ್ವಾದ, ಕೋಳಿ ಅಂಕ, ಜಮೀನುದಾರಿಕೆ, ಕೃಷಿ ಪರಂಪರೆ, ನಂಬಿಕೆ-ನಡವಳಿಕೆ ಇತ್ಯಾದಿಗಳ ಭಾವಪೂರ್ಣ ಪ್ರದರ್ಶನದೊಂದಿಗೆ “ಕಂಬುಳ” ಉತ್ತಮವಾಗಿ ಮೂಡಿ ಬಂದಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ದೇವಳ ನೌಕರರು, ಊರಿನ ನಾಗರಿಕರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಕುತೂಹಲದಿಂದ “ಕಂಬುಳ” ವೀಕ್ಷಿಸಿದರು. ಚಲನಚಿತ್ರದ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಲನಚಿತ್ರ ನಿರ್ದೇಶಕ ರಾಜೇಂದ್ರಸಿAಗ್ ಬಾಬು ಅವರನ್ನು ಗೌರವಿಸಿ, ಅಭಿನಂದಿಸಿದರು.