ಮಂಗಳೂರು: ಪುತ್ತೂರಿನ ಹುಡುಗ ಅಕ್ಷಯ್ ನಾಯಕ್ ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ ಕೊಂಕಣಿ ಚಿತ್ರ 'ಜೆವಣ್' 17ನೇ ಬೆಂಗಳೂರು ಅಂತರರಾಷ್ಟೀಯ ಚಿತ್ರೋತ್ಸವದ 'ಅನ್ಸಂಗ್ ಇನ್ಕ್ರೆಡಿಬಲ್ ಇಂಡಿಯಾ' ಭಾರತೀಯ ಉಪಭಾಷಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆ ಆಗಿದ್ದು ಬೆಂಗಳೂರಿನ ಲುಲು ಮಾಲ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಮಂಗಳೂರು,ಉಡುಪಿ,ಪುತ್ತೂರು, ಕುಂದಾಪುರ, ಹುಬ್ಬಳ್ಳಿ, ಬೆಂಗಳೂರು, ಮುಂಬೈ, ಶಿವಮೊಗ್ಗ ದಲ್ಲಿ ಪ್ರದರ್ಶನ ಕಂಡಿದ್ದು, ಕುವೈತ್, ಅರಿಝೋನಾ, ಮೆಲ್ಬೋರ್ನ್, ಕ್ಯಾಲಿಫೋರ್ನಿಯಾಗಳಲ್ಲೂ ಪ್ರದರ್ಶನ ಕಂಡಿದೆ.
ಕ್ಯಾಟರಿಂಗ್ ಒಂದರಲ್ಲಿ ಕೆಲಸ ಮಾಡುವ ಮೂವರಲ್ಲಿ ಒಬ್ಬನಿಗೆ ಹೆಣ್ಣು ನೋಡಲು ಹೋಗುವಲ್ಲಿಂದ ಪ್ರಾರಂಭವಾಗುವ ಚಿತ್ರ ಹಲವು ಆಯಾಮಗಳ ಒಳಹೊಕ್ಕು ಮೋಸ, ವಂಚನೆಯ ಪ್ರಪಂಚದಲ್ಲಿ ತಮ್ಮ ಆಸೆ ಸಾಧಿಸಲಾಗದೆ ತೊಳಲಾಡುವ ಮೂವರು ಮತ್ತು ಅವರೊಂದಿಗೆ ಸೇರಿಕೊಳ್ಳುವ ಇತರ ಪಾತ್ರಗಳ ಅಪರೂಪದ ಕಥಾಹಂದರ ಕಥೆ ಹೇಳುತ್ತಾ ಸಾಗುತ್ತದೆ.
ಶ್ರೀ ಮಹಮ್ಮಯಿ ಸಿನಿ ಕ್ರಿಯೇಷನ್ಸ್ ಹಾಗು ಧಾತ್ರಿ ಸಿನಿ ಕಂಬೈನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಕುಂಬ್ಳೆ ವೆಂಕಟೇಶ್ ಭಟ್ ಮತ್ತು ಕರೋಪಾಡಿ ಅಕ್ಷಯ್ ನಾಯಕ್ ನಿರ್ಮಾಪಕರಾಗಿದ್ದು, ಚಿತ್ರಕತೆೆ-ನಿರ್ದೇಶನ-ಸಂಕಲನ ಕರೋಪಾಡಿ ಅಕ್ಷಯ ನಾಯಕ್ ಮಾಡಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಮ್.ಕೆ ಮಠ ಮತ್ತು ಸೂರಜ್ ಭಟ್ ಬಂಟ್ವಾಳ್ ಕಥೆ ಸಂಭಾಷಣೆ ಇದ್ದು ಅರುಣ್ ರೈ ಪುತ್ತೂರು ಛಾಯಾಗ್ರಹಣ, ಚಿತ್ರಕ್ಕೆ ಗೀತ ಸಾಹಿತ್ಯವನ್ನು ಸೂರಜ್ ಭಟ್ ಬಂಟ್ವಾಳ್ ಹಾಗೂ ಸಾತ್ವಿಕ್ ಪಡಿಯರ್ ಬರೆದಿದ್ದು ಸಂಗೀತ ನಿರ್ದೇಶನ ಸಾತ್ವಿಕ್ ಪಡಿಯರ್ ನೀಡಿದ್ದಾರೆ.