image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ದೈವ' ಚಿತ್ರದಿಂದ 2026ರ ಮೊದಲ ಮಾಸ್ ಸಾಂಗ್ 'ರಾವಣಾಸುರಂ' ಬಿಡುಗಡೆ

'ದೈವ' ಚಿತ್ರದಿಂದ 2026ರ ಮೊದಲ ಮಾಸ್ ಸಾಂಗ್ 'ರಾವಣಾಸುರಂ' ಬಿಡುಗಡೆ

ಕಲ್ಪವೃಕ್ಷ  ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿದ್ದು, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿರುವ ಎಂ. ಜೆ ಜಯರಾಜ್ ಅವರ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ದೈವ" ಚಿತ್ರದ "ರಾವಣಾಸುರಂ" ಹಾಡು ಕಲ್ಪವೃಕ್ಷ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.     

ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ನಾಯಕನ ಪರಿಚಯಿಸುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಮತ್ತು ವಿಜೇತ ಮಂಜಯ್ಯ ಹಾಡಿದ್ದಾರೆ.

ಮೂರ್ತಿ ಟಿ.ಎಂ ರವರ ಸಾಹಿತ್ಯಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತವಿದೆ. ಪಕ್ಕಾ ಮಾಸ್ ಆಗಿ ಮೂಡಿಬಂದಿರುವ ಈ ಹಾಡಿಗೆ ವಿನಯ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ, ಕಮರ್ಷಿಯಲ್ ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳನ್ನು ಈ ಹಾಡು ಒಳಗೊಂಡಿದೆ, ಈಗಾಗಲೇ ಚಿತ್ರೀಕರಣ ಮುಗಿಸಿರುವ "ದೈವ" ಚಿತ್ರ ಸದ್ಯದಲ್ಲೇ ನಿಮ್ಮೆದುರು ಬರಲಿದೆ.

ಚಿತ್ರಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತ ಹಾಗೂ ಸಿದ್ಧಾರ್ಥ್ ಹೆಚ್.ಆರ್ ಅವರ ಕ್ಯಾಮರಾ ಕೈಚಳಕವಿದೆ. ಸುರಭಿ, ನೀತು ರಾಯ್, ಬಾಲರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Category
ಕರಾವಳಿ ತರಂಗಿಣಿ