ನಿರ್ದೇಶಕ ಪ್ರಫುಲ್ ತಂಬುರ್ S ನಿರ್ದೇಶನದ ಹೊಸ ಸಿನಿಮಾವೊಂದು ಯಶಸ್ವಿಯಾಗಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದೆ. Cosmic Production ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ಹೆಸರನ್ನು ಇನ್ನೂ ಚಿತ್ರತಂಡ ಫೈನಲೈಸ್ ಮಾಡದೇ ಇರುವುದು ಕುತೂಹಲಕಾರಿಯಾಗಿದೆ.
ಈ ಚಿತ್ರದಲ್ಲಿ ಕಿರುತೆರೆ ಕಲಾವಿದ ನನ್ನರಸಿ ರಾಧೆ ಹಾಗೂ ತ್ರಿಪುರ ಸುಂದರಿ ಧಾರಾವಾಹಿಗಳಲ್ಲಿ ನಟಿದಿರುವ ಅಭಿನವ್ ಮುಕುಂದನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೆಟಿಎಂ, ಎಲ್ಲೋ ಜೋಗಪ್ಪ ನಿನ್ ಅರಮನೆ ಸಿನಿಮಾದಲ್ಲಿ ನಟಿಸಿದ ನಟಿ ಸಂಜನಾ ದಾಸ್ ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ತಾರಾಗಣದಲ್ಲಿ ದತ್ತಣ್ಣ, ರಾಮೇಶ್ವರಿ ವರ್ಮಾ, ಲಾವಣ್ಯ ನಟನಾ, ಶಿವಾನಿ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಎಂ ಅವರ ಸಹ ನಿರ್ದೇಶನವಿದೆ. ನಿರೀಕ್ಷಿತ್ ಛಾಯಾಗ್ರಹಣವಿದೆ. ಭರತ್ ಜನಾರ್ಧನ್ ಸಂಗೀತ ಸಂಯೋಜನೆಯಿದೆ.