image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುರಿ ಜಗನ್ನಾಥ್‌-ವಿಜಯ್‌ ಸೇತುಪತಿ ಸಿನಿಮಾಗೆ ಸಂಯುಕ್ತ ಮೆನನ್ ಎಂಟ್ರಿ..!

ಪುರಿ ಜಗನ್ನಾಥ್‌-ವಿಜಯ್‌ ಸೇತುಪತಿ ಸಿನಿಮಾಗೆ ಸಂಯುಕ್ತ ಮೆನನ್ ಎಂಟ್ರಿ..!

ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್‌ ಸೇತುಪತಿ ಕಾಂಬೋದ ಬಹುನಿರೀಕ್ಷಿತ ಸಿನಿಮಾದಿಂದ ಮತ್ತೊಂದು ಅಪ್‌ ಡೇಟ್‌ ಸಿಕ್ಕಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಾಗಿರುವ ಚಿತ್ರಕ್ಕೀಗ ಪ್ರತಿಭಾನ್ವಿತ ನಟಿ ಸಂಯುಕ್ತ ಮೆನನ್‌ ಎಂಟ್ರಿ ಕೊಟ್ಟಿದ್ದಾರೆ. ಪುರಿ ಕನೆಕ್ಟ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಟಬು, ದುನಿಯಾ ವಿಜಯ್‌ ಕುಮಾರ್‌ ನಟಿಸುವುದು ಖಚಿತವಾಗಿದೆ. ಇದೀಗ ನಟಿ ಸಂಯುಕ್ತ ಮೆನನ್‌ ಅವರನ್ನು ಚಿತ್ರತಂಡ ಸ್ವಾಗತಿಸಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಸಂಯುಕ್ತ ನಾಯಕಿ ಪಾತ್ರವನ್ನು ಪೋಷಣೆ ಮಾಡುತ್ತಿಲ್ಲ. ಬದಲಾಗಿ ಪ್ರಮುಖ ಪಾತ್ರವೊಂದಲ್ಲಿ ಅಭಿನಯಿಸಲಿದ್ದಾರೆ. ಕಥೆ ಮತ್ತು ಅವರ ಪಾತ್ರದಿಂದ ರೋಮಾಂಚನಗೊಂಡಿರುವ ಸಂಯುಕ್ತ ಚಿತ್ರೀಕರಣವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಹೈದ್ರಾಬಾದ್‌ ಹಾಗೂ ಚೆನ್ನೈನಲ್ಲಿ ಮಾಡಲು ಸಿದ್ಧವಾಗಿದ್ದು, ಜೂನ್ ಕೊನೆಯ ವಾರದಲ್ಲಿ ರೆಗ್ಯೂಲರ್‌ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಪ್ಯಾನ್-ಇಂಡಿಯಾ ಯೋಜನೆಯು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ  ಘಟಾನುಘಟಿ ಕಲಾವಿದರ ಎಂಟ್ರಿಯಿಂದಾಗಿ ಪಾತ್ರವರ್ಗದ ತೂಕ ಹೆಚ್ಚುತ್ತಿದೆ.

Category
ಕರಾವಳಿ ತರಂಗಿಣಿ