image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅನಾವರಣಗೊಂಡ 'ಬ್ಲ್ಯಾಕ್ ಶೀಪ್' ಚಿತ್ರದ ಟೀಸರ್, ಟ್ರೈಲರ್ ಮತ್ತು ಹಾಡು....

ಅನಾವರಣಗೊಂಡ 'ಬ್ಲ್ಯಾಕ್ ಶೀಪ್' ಚಿತ್ರದ ಟೀಸರ್, ಟ್ರೈಲರ್ ಮತ್ತು ಹಾಡು....

ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ "ಬ್ಲ್ಯಾಕ್ ಶೀಪ್"  ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್, ಟ್ರೇಲರ್ ಮತ್ತು ಹಾಡು ಅನಾವರಣ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಮೂಲತ: ಡ್ಯಾನ್ಸರ್, ’ಹರೇ ರಾಮ ಹರೇ ಕೃಷ್ಣ’ದಲ್ಲಿ ಶೃತಿಹರಿಹರನ್, ’ದೇವ್ ಸನ್ ಆಫ್ ಮುದ್ದೆಗೌಡ’ದಲ್ಲಿ ಚಾರ್ಮಿಕೌರ್‌ಗೆ ಜೋಡಿ, ’ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಕ್ಕೆ ಡ್ಯಾನ್ಸ್ ಕೋರಿಯಾಗ್ರಾಫರ್ ಆಗಿದ್ದ *ಜೀವನ್ ಹಳ್ಳಿಕಾರ್* ಇದೆಲ್ಲಾ ಅನುಭವದಿಂದ ಈಗ ಸಿನಿಮಾಕ್ಕೆ *ರಚನೆ,ಚಿತ್ರಕಥೆ, ನಿರ್ದೇಶನ ಹಾಗೂ ನೃತ್ಯ ಸಂಯೋಜನೆ* ಮಾಡಿದ್ದಾರೆ. ಗ್ಲಿಟ್ಟರರ್ರ‍್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಸ್ ಮೂಲಕ  ಅಶ್ವಿನಿ ಗುರು ಚರಣ್ ಬಂಡವಾಳ ಹೂಡುವ ಜತೆಗೆ ಕಾಸ್ಟ್ಯೂಮ್ ಡಿಸೈನರ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಂಜುನಾಥ್.ಪಿ.ರಾವ್ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಐದು ಜಾನರ್, ಎರಡು ಮಗ್ಗಲುಗಳೊಂದಿಗೆ ಕ್ರೈಮ್, ಸಸ್ಪೆನ್ಸ್, ಥ್ರಿಲ್‌ದಲ್ಲಿ ಕಥೆಯು ಸಾಗುತ್ತದೆ. ಉಪೇಂದ್ರ ಅಭಿಮಾನಿಯಾಗಿ, ಅವರಿಂದ ಸ್ಪೂರ್ತಿಗೊಂಡು ಭೂತಕಾಲ, ವರ್ತಮಾನಕಾಲದ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಒಂದಷ್ಟು ನೈಜ ಘಟನೆಗಳನ್ನು ಸಿನಿಮಾಕ್ಕೆ ಬಳಸಲಾಗಿದೆ. ಜಾನರ್‌ದಲ್ಲಿ ರೈಮಿಂಗ್ ಪದ ಹುಟ್ಟಿಕೊಂಡಿದ್ದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಹೀರೋ ಮತ್ತು ವಿಲನ್ ಮಧ್ಯೆ ನಡೆದ ಸಂಘರ್ಷದಲ್ಲಿ ಕೆಲ ಘಟನೆಗಳನ್ನು ಮರೆತು ಹೇಗೆ ಜೀವನ ಸಾಗಿಸಿರುತ್ತಾನೆ. ಹಾಗೆ ಮರೆತ ವಿಷಯಗಳನ್ನು ಹುಡುಕಲು ಯಾವ ರೀತಿ ಪ್ರಾರಂಭಿಸುತ್ತಾನೆ.  ಕೊನೆ ಹಂತದವರೆಗೂ ಕುತೂಹಲ ಹೆಚ್ಚಿಸಲಿದೆ. ಅಲ್ಲದೆ ಮಾಫಿಯಾ ಅಂಶಗಳನ್ನು ತೋರಿಸಲಾಗಿದೆ. ಬೆಂಗಳೂರು, ಮಂಗಳೂರು, ಬಾಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಅಂತ ಮಾಹಿತಿ ತೆರೆದಿಟ್ಟರು.

ಫಿಟ್‌ನೆಸ್ ಮಾಡಲ್ ಆಗಿರುವ ವಿಶಾಲ್‌ಕಿರಣ್ ಸಿಬಿಐ ಅಧಿಕಾರಿಯಾಗಿ ನಾಯಕ. ಶಿವಾಂಗಿದಾವೆ ನಾಯಕಿ. ಖಳನಾಗಿ ಪ್ರಶಾಂತ್.ವಿ.ಹರಿ. ಉಳಿದಂತೆ ನಿಶಾಹೆಗಡೆ, ಸಿದ್ಲುಂಗು ಶ್ರೀಧರ್, ಕೃಷ್ಣಹೆಬ್ಬಾಳೆ, ಸುಂದರ್‌ವೀಣಾ, ಪುನೀತ್, ದೀಪಿಕಾ ಅಡ್ತಲೆ ಮುಂತಾದವರು ಅಭಿನಯಿಸಿದ್ದಾರೆ. ಅಭಿಜಿತ್‌ಮಹೇಶ್-ಶೈಲೇಶ್ ಕುಮಾರ್ ಸಾಹಿತ್ಯದ ಗೀತೆಗಳಿಗೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವೂ, ಸಂಕಲನ ಎಸ್.ಆಕಾಶ್ ಮಹೇಂದ್ರಕರ್, ಸಾಹಸ ಅವತಾರ್ ಆದಿತ್ಯ ಅವರದಾಗಿದೆ.

Category
ಕರಾವಳಿ ತರಂಗಿಣಿ