image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭುವನ ಗಗನಂ ಪ್ರೇಮಗೀತೆ ರಿಲೀಸ್

ಭುವನ ಗಗನಂ ಪ್ರೇಮಗೀತೆ ರಿಲೀಸ್

ಭುವನಂ ಗಗನಂ ಸಿನಿಮಾ ತನ್ನ ಟೀಸರ್ ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೇಂದ್ರ ಬಿಂದುವಾಗಿದೆ. ಕ್ಲಾಸ್ ಕಥೆಗಳ ಮೂಲಕ ಗಮನಸೆಳೆದ ಪೃಥ್ವಿ ಅಂಬಾರ್ ಹಾಗೂ ಮಾಸ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ಪ್ರಮೋದ್, ಮೊದಲ ಬಾರಿ ಒಟ್ಟಿಗೆ ತೆರೆಹಂಚಿಕೊಂಡಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಅನಾವರಣಗೊಂಡಿದೆ. ಹೊಸ ಪ್ರತಿಭೆಗಳಿಗೆ ಸದಾ ಬೆನ್ನುತಟ್ಟುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ, ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಭುವನಂ ಗಗನಂ ಎಂದು ಶುರುವಾಗುವ ಹಾಡಿಗೆ ಅನಿರುದ್ಧ ಶಾಸ್ತ್ರೀ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಅರ್ಮಾನ್ ಮಲ್ಲಿಕ್ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಗುಮ್ಮಿನೇನಿ ವಿಜಯ್ ಈ ಮಧುರ ಗೀತೆಗೆ ಟ್ಯೂನ್ ಹಾಕಿದ್ದಾರೆ. ಭುವನಂಗಗನಂ ಟೈಟಲ್ ಟ್ರ್ಯಾಕ್ ನಲ್ಲಿ ಪ್ರಮೋದ್ ಹಾಗೂ ರೆಚೆಲ್ ಡೇವಿಡ್ ಜೋಡಿಯ ಕೆಮಿಸ್ಟ್ರೀ ನೋಡುಗರಿಗೆ ಇಷ್ಟವಾಗುತ್ತದೆ. 

 

ಗಿರೀಶ್ ಮೂಲಿಮನಿ ಭುವನಂ ಗಗನಂ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದು, ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರು ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡ್ಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ ಭುವನಂ ಗಗನಂಗೆ ಹಣ ಹಾಕಿದ್ದಾರೆ.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಪ್ರಚಾರ ಅಖಾಡಕ್ಕೆ ಇಳಿದಿರುವ ಚಿತ್ರತಂಡ ಆದಷ್ಟು ಬೇಗ ಭುವನಂ ಗಗನಂ ಸಿನಿಮಾ ತೆರೆಗೆ ತರಲಿದೆ.

Category
ಕರಾವಳಿ ತರಂಗಿಣಿ