image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅರ್ಜುನ್ ಕಾಪಿಕಾಡ್ ನಿರ್ದೇಶನದ 'ಟಾಸ್' ತುಳು ಮತ್ತು ಕನ್ನಡ ಸಿನಿಮಾಕ್ಕೆ ಮುಹೂರ್ತ

ಅರ್ಜುನ್ ಕಾಪಿಕಾಡ್ ನಿರ್ದೇಶನದ 'ಟಾಸ್' ತುಳು ಮತ್ತು ಕನ್ನಡ ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ "ಟಾಸ್" ತುಳು ಮತ್ತು ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು. ಶರವು ಶ್ರೀ ಮಹಾಗಣಪತಿ ದೇವಸ್ಥಾದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು.ರಾಜ್ಯ ಪ್ರಶಸ್ತಿ ಪುರಸ್ಜೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ಕಾಪಿಕಾಡ್ ನಿರ್ದೇಶನ ಮತ್ತು ಅಭಿನಯದ ಟಾಸ್ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. 

ನಿರ್ಮಾಪಕರು: ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ,  ಸಂಗೀತ :ಮಣಿಕಾಂತ್ ಕದ್ರಿ ಛಾಯಾಗ್ರಾಹಣ: ಜಾಯಿಲ್ ಶಮನ್ ಡಿಸೋಜಾ,  ಸಂಕಲನ ಯಶ್ವಿನ್ ಶೆಟ್ಟಿಗಾರ್,  ಸಹ-ನಿರ್ದೇಶಕರು: ಪ್ರಶಾಂತ್ ಅಳ್ವಾ, ಅನೂಪ್ ಸಾಗರ್, ವಿಕ್ರಮ್ ದೇವಾಡಿಗ, ಸುನಿಲ್, ಸೌರವು, ಎಸ್ಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ಮ್ಯಾನೇಜರ್ ಶಬರೀಶ್ ಕಬ್ಬಿನಳೆ,  ಪ್ರೊಡಕ್ಷನ್ - ಸಂತೋಶ್ ಪಂಜಿಕಲ್. ತಾರಾಗಣದಲ್ಲಿ ಡಾ ||ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಶಶಿರಾಜ್ ಕಾವೂರು, ಸುತ್ತೆಜ್ ಶೆಟ್ಟಿ ಶೋಭರಾಜ್ ಪಾವೂರ್, ಚೈತ್ರ ಶೆಟ್ಟಿ, ಕೃತಿ ಶೆಟ್ಟಿ ಅಭಿನಯಿಸಲಿದ್ದಾರೆ.

ಸಮಾರಂಭದಲ್ಲಿ ಡಾ ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸುತ್ತೇಜ್ ಶೆಟ್ಟಿ, ಕ್ಯಾಟ್ಕಾದ ಅಧ್ಯಕ್ಷ  ಲಂಚೂಲಾಲ್, ಶರ್ಮಿಳಾ ಕಾಪಿಕಾಡ್, ಸುತ್ತೇಜ್ ಶೆಟ್ಟಿ, ಶೋಭರಾಜ್ ಪಾವೂರು, ಬಾಳ ಜಗನ್ನಾಥ ಶೆಟ್ಟಿ, ಮಣಿಕಾಂತ್ ಕದ್ರಿ, ಅನೂಪ್ ಸಾಗರ್, ಯತೀಶ್ ಪೂಜಾರಿ, ನಿತೇಶ್ ಸುವರ್ಣ, ಕೃತಿ ಶೆಟ್ಟಿ, ಚೈತ್ರ ಶೆಟ್ಟಿ ಉಪಸ್ಥಿತರಿದ್ದರು. 

Category
ಕರಾವಳಿ ತರಂಗಿಣಿ