image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಡುಗಡೆಗೊಂಡ 'ಉದಯ ಸೂರ್ಯ' ಟ್ರೇಲರ್ ...

ಬಿಡುಗಡೆಗೊಂಡ 'ಉದಯ ಸೂರ್ಯ' ಟ್ರೇಲರ್ ...

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಉದಯ ಸೂರ್ಯ’ ಚಿತ್ರದ ಟ್ರೇಲರ್ ಅನಾವರಣ ಸಮಾರಂಭವು ಭದ್ರಾವತಿ ತಾಲ್ಲೊಕಿನ ಆನವೇರಿ ಗ್ರಾಮದ ಶ್ರೀದೇವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಸಿದ್ದೇಶ್ವರ ಫಿಲ್ಮ್ ಲಾಂಚನದಲ್ಲಿ ಹಂಚಿನಸಿದ್ದಾಪುರ ಗ್ರಾಮದವರಾದ ಮಂಜುನಾಥ್.ಎಸ್.ಪಿ, ಟೆಕ್ಕಿಯಾಗಿರುವ ಸುನಿಲ್.ಎಂ ಮತ್ತು ಹರೀಶ್.ಎಚ್.ಎಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಅನುಭವ ಪಡೆದುಕೊಂಡಿರುವ ಎಸ್.ಎಸ್.ಪ್ರಕಾಶ್ ರಾಜ್ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ’ಸುಮ್ಮಿದ್ರೆ ಮೂನ್ ರೈಜ್ ಆದ್ರೆ ಸನ್’ ಎಂಬ ಕ್ಯಾಚಿ ಅಡಿಬರಹವಿದೆ.

 ಪ್ರೀತಿಲಿ ಮೋಸ ಹೋದ ಇಬ್ಬರ ಸ್ನೇಹಿತರ ಸತ್ಯ ಘಟನೆಯನ್ನು ಒಳಗೊಂಡಿದೆ. ಗ್ರಾಮೀಣ ಊರಿನಲ್ಲಿ ವ್ಯಾಘ್ರ ಉಗ್ರಪ್ಪನ ಅಟ್ಟಹಾಸ. ಈತನ ಮೇಲೆ ಸೇಡಿನ ಪ್ರತಿಕಾರ ಎಲ್ಲವನ್ನು ಮಾಸ್ ರೂಪದಲ್ಲಿ ತೋರಿಸಲಾಗಿದೆ. ಪಕ್ಕಾ ಹಳ್ಳಿ ಸೊಗಡಿನ ಕನ್ನಡ ಭಾಷೆಯನ್ನು ಬಳಸಲಾಗಿದೆ.

ತಾರಾಗಣದಲ್ಲಿ ಎಸ್.ಎಸ್.ಪ್ರಕಾಶ್‌ರಾಜ್, ಜೈರಾಜ್, ಗೌಡಿಹುಳಿಯಾರ್, ಜೀವಮಹೇಶ್, ಅಶೋಕ್‌ನಾಯ್ಕ್, ಪ್ರಶಾಂತ್‌ಜೈ, ತನುಪ್ರಸಾದ್, ವೈಷ್ಣವಿ, ತ್ರಿವೇಣಿ.ಕೆ, ಲಾವಣ್ಯಗಂಗಾಧರಯ್ಯ, ಮಣಿಮೈದೊಳಲು, ದನಮ್‌ಪೋಲೀಸ್, ಶಿವಮೊಗ್ಗ ರಾಮಣ್ಣ, ಪ್ರಶಾಂತ್‌ಪವರ್, ತನುಜಾ ಮುಂತಾದವರು ನಟಿಸಿದ್ದಾರೆ. ಏಳು ಹಾಡುಗಳಿಗೆ ಯಶವಂತ ಭೂಪತಿ ಸಂಗೀತ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಸಂಕಲನ ಮಲ್ಲಿ, ಸಾಹಸ ವೈಲೆಂಟ್ ವೇಲು, ನೃತ್ಯ ಸ್ಟಾರ್ ನಾಗಿ, ಕಲೆ ನವೀನ್ ಹಾಡೋಹಳ್ಳಿ-ಸಚ್ಚಿನ್ ಗೌಡ ಹಾಸನ್ ಅವರದಾಗಿದೆ.

ತಂಡಕ್ಕೆ ಶುಭ ಹಾರೈಸಲು ’ಆಪಲ್ ಕಟ್’ ಸಿನಿಮಾದ ನಾಯಕ, ನಿರ್ದೇಶಕಿ, ಸಿನಿಮಾ ಬಿಡುಗಡೆ ಜವಬ್ದಾರಿಯನ್ನು ಹೊತ್ತುಕೊಂಡಿರುವ ಸಚಿತ್ ಫಿಲಂಸ್‌ನ ವೆಂಕಟ್‌ಗೌಡ ಹಾಗೂ ಆನವೇರಿ, ಹಂಚಿನಸಿದ್ದಾಪುರ ಗ್ರಾಮದ ಮುಖ್ಯಸ್ಥರುಗಳು ಆಗಮಿಸಿದ್ದರು.

ಎ2 ಮ್ಯೂಸಿಕ್ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಶಿವಮೊಗ್ಗ, ನ್ಯಾಮತಿ, ಹೊನ್ನಾಳಿ, ಹಂಚಿನಸಿದ್ದಾಪುರ, ಬಸವಪುರ, ಅನವೇರಿ, ತಿಂಲ್ಲಾಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಚಿತ್ರವು ಏಪ್ರಿಲ್ ಮೂರನೇ ವಾರದಲ್ಲಿ ತೆರೆ ಕಾಣುತ್ತಿದೆ.

Category
ಕರಾವಳಿ ತರಂಗಿಣಿ