image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಟೀಲು ದುರ್ಗೆಯ ದಿವ್ಯ ಅಂಗಣದಲ್ಲಿ “ಛತ್ರಪತಿ ಶಿವಾಜಿ”ಯ ರಂಗ ಪ್ರವೇಶ ...

ಕಟೀಲು ದುರ್ಗೆಯ ದಿವ್ಯ ಅಂಗಣದಲ್ಲಿ “ಛತ್ರಪತಿ ಶಿವಾಜಿ”ಯ ರಂಗ ಪ್ರವೇಶ ...

ಮಂಗಳೂರು:  ಮಾ.6 ರಂದು ರಾತ್ರಿ 7 ಗಂಟೆಗೆ ಕಟೀಲು ದುರ್ಗೆಯ ದಿವ್ಯ ಅಂಗಣದಲ್ಲಿ  “ಛತ್ರಪತಿ ಶಿವಾಜಿ” ರಂಗ ಪ್ರವೇಶ ಮಾಡಲಿದೆ ಎಂದು ನಾಟಕಕಾರ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು. ಹೊಸ ನಾಟಕ "ಛತ್ರಪತಿ ಶಿವಾಜಿ" ಕುರಿತಾದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಒಂದೇ ತರದ ನಾಟಕ ಮಾಡುವುದಿಲ್ಲ ಎಂದು ಹಿಂದೆಯೇ ನಿರ್ದರಿಸದ್ದೇವೆ. ಹಾಗಾಗಿ ಶಿವದೂತ ಗುಳಿಗೆಯ ನಂತರ ಅದೇ ತರದ ನಾಟಕ ಮಾಡುವುದು ನನಗೆ ಮನಸ್ಸಿರಲಿಲ್ಲ. ಅದರ ಜೊತೆ ಸಾಮಾಜಿಕ ನಾಟಕವೂ ಬೇಡ ಎಂದು ಐತಿಹಾಸಿಕ ನಾಟಕ ಮಾಡುವ ಯೋಜನೆ ಕೈಗೆತ್ತಿಕೊಂಡೆವು.

ಶಶಿರಾಜ್ ಕಾವೂರು ಉತ್ತಮವಾಗಿ ಮತ್ತು ಬಹಳ ವೇಗವಾಗಿ ಕತೆ ಮಾಡಿದ್ದಾರೆ. ಎರಡೂ ಕಾಲು ಗಂಟೆಯ ನಾಟಕ 13 ದೃಶ್ಯಗಳಲ್ಲಿ ಸಂಯೋಜನೆಗೊಂಡಿದ್ದು, 18 ಪ್ರಬುದ್ಧ ಕಲಾವಿದರು ಕಥೆಗೆ ಜೀವ ತುಂಬಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳು,  ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದಲ್ಲಿ ವಿಶೇಷ ಆಕರ್ಷಣೆ ಯಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಹಾಗೂ ಇತರ ಸ್ಥಳೀಯ ಗಾಯಕರು ಹಾಡಿದ್ದಾರೆ. ಐತಿಹಾಸಿಕ ನಾಟಕವಾದ ಕಾರಣ ವಿಶೇಷವಾದ ವಸ್ತ್ರಾಭರಣ ವಿನ್ಯಾಸ ಹೊಂದಿದ್ದು, ಇಲ್ಲಿಯವರೆಗೂ ಕಲಾಸಂಗಮದಲ್ಲಿ ಸಂಗೀತ ನಿರ್ದೇಶಕರಾಗಿದ್ದ ಎ ಕೆ ಕೋಕಿಲ ಹಾಗೂ ನನ್ನ ಮಗಳು ಅದರ ಜವಾಬ್ಧಾರಿ ಹೊತ್ತಿದ್ದಾರೆ. ಪೃಥ್ವಿ ಅಂಬಾರ್, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಚಂದ್ರಹಾಸ ಉಳ್ಳಾಲ್, ನಾಗರಾಜ ವರ್ಕಾಡಿ, ಸುನಿಲ್ ಪಲ್ಲಮಜಲು, ಉಷಾ ಭಂಡಾರಿ ಅವರು ಪ್ರಮುಖ ಪಾತ್ರಗಳಿಗೆ ಸ್ವರ ನೀಡಿದ್ದಾರೆ. ಭಾಷೆ ಮತ್ತು ಧರ್ಮ ವೈಷಮ್ಯದ ಗಡಿಗಳನ್ನು ಮೀರಿ ರೂಪುಗೊಂಡ ಹೊಸತನದ ಟ್ರೆಂಡ್ ಸೆಟ್ಟಿಂಗ್ ನಾಟಕ 'ಛತ್ರಪತಿ ಶಿವಾಜಿ' ನಾಟಕದ ಪೂರ್ವಸಿದ್ಧತೆಗಳು ಪೂರ್ಣಗೊಂಡಿವೆ.

ಯುವ ಕಲಾವಿದ ಪ್ರೀತೇಶ್ ಕುಮಾರ್ ಬಳ್ಳಾಲ್‌ಬಾಗ್ 'ಶಿವಾಜಿ' ಪಾತ್ರದಲ್ಲಿ ಅಭಿನಯಿಸಲಿದ್ದು, ಚಿತ್ರ ನಟ ಪೃಥ್ವಿ ಅಂಬರ್ ಅವರು ಶಿವಾಜಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.  ಮುಂದಿನ ವರ್ಷದ ಕೊನೆಯವರೆಗೂ ಬುಕ್ಕಿಂಗ್ ಬರುತ್ತಿದ್ದು, ದಿನಕ್ಕೆ ಒಂದು ಪ್ರದರ್ಶನ ಮಾತ್ರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ  ಪ್ರೀತೇಶ್ ಬಲ್ಲಾಳ್ ಬಾಗ್, ಏ ಕೆ ಕೋಕಿಲ, ಮಣಿಕಾಂತ್ ಕದ್ರಿ ಮತ್ತು ಶಶಿರಾಜ್ ಕಾವೂರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ