image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಸರಾ ತಂಡದ *ದಿ ಪ್ಯಾರಡೈಸ್* ಝಲಕ್ ಅನಾವರಣ...ರಗಡ್ ಅವತಾರದಲ್ಲಿ ಅಬ್ಬರಿಸಿದ ನಾನಿ....

ದಸರಾ ತಂಡದ *ದಿ ಪ್ಯಾರಡೈಸ್* ಝಲಕ್ ಅನಾವರಣ...ರಗಡ್ ಅವತಾರದಲ್ಲಿ ಅಬ್ಬರಿಸಿದ ನಾನಿ....

ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ದಸರಾ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಸಾರಥ್ಯದ ದಿ ಪ್ಯಾರಡೈಸ್ ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ರಾ ಸ್ಟೇಟ್ ಮೆಂಟ್ ಎಂಬ ಟೈಟಲ್ ನಡಿ ರಿಲೀಸ್ ಆಗಿರುವ ಝಲಕ್ ಸಿಕ್ಕಪಟ್ಟೆ ರಾ ಹಾಗೂ ರಡಗ್ ಆಗಿದೆ. 

ಸಖತ್ ಮಾಸ್ ಆಗಿ ರಕ್ತಸಿಕ್ತ ಗೆಟಪ್ ನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಕಾಣಿಸಿಕೊಂಡಿದ್ದು, ಹಿಂದೆಂದೂ ಕಾಣದ ಹೊಸ ಲುಕ್ ನಲ್ಲಿ ನಾನಿ ಪ್ರತ್ಯಕ್ಷರಾಗಿದ್ದಾರೆ. ಈ ಹಿಂದೆ ದಸರಾ ಸಿನಿಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಮತ್ತೊಮ್ಮೆ ನಾನಿ ಹಾಗೂ ಶ್ರೀಕಾಂತ್ ಒಡೆಲಾಗೆ ಸಾಥ್ ಕೊಡುತ್ತಿದ್ದಾರೆ.  'ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ನಡಿ ಬಹಳ ಅದ್ಧೂರಿಯಾಗಿ ದಿ ಪ್ಯಾರಡೈಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ, ಜಿ.ಕೆ.ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ದಿ ಪ್ಯಾರಡೈಸ್ ಸಿನಿಮಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರ್ತಿದ್ದು, ಸದ್ಯ ದಿ ಪ್ಯಾರಡೈಸ್ ಸಿನಿಮಾದ ಮೊದಲ ಝಲಕ್ ನ್ನು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ದಿ ಪ್ಯಾರಡೈಸ್ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈ ಬಾರಿಯೂ‌ ನಿರ್ದೇಶಕ ಶ್ರೀಕಾಂತ್ ಒಡೆಲಾ ದೊಡ್ಡದಾಗಿ ಏನೋ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ.

Category
ಕರಾವಳಿ ತರಂಗಿಣಿ