image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಏಕೈಕ ಸಿನಿಮಾ "ಲಚ್ಚಿ"

ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಏಕೈಕ ಸಿನಿಮಾ "ಲಚ್ಚಿ"

ಪುಣೆಯಲ್ಲಿ ಫೆಬ್ರವರಿ 13 ರಿಂದ 20 ರವರೆಗೆ ಚಿತ್ರೋತ್ಸವ ನಡೆಯಲಿದ್ದು, 11 ಸ್ಕ್ರೀನ್‌ ಗಳಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರೋತ್ಸವದ ಭಾರತೀಯ ಸಿನಿಮಾ ವಿಭಾಗದಲ್ಲಿ "ಲಚ್ಚಿ" ಚಿತ್ರವು ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಕೃಷ್ಣೇಗೌಡರು ನಿರ್ದೇಶಿಸಿದ್ದಾರೆ. ಫೆಬ್ರವರಿ 14 ರಂದು ಚಿತ್ರೋತ್ಸವದ ಎರಡನೇ ದಿನ ಪಿವಿಆರ್‌ ನ ಆರನೇ ಸ್ಕ್ರೀನ್‌ ನಲ್ಲಿ ಸಂಜೆ 5.45 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ. ಮತ್ತೆ 16 ರಂದು ಮರು ಪ್ರದರ್ಶನಗೊಳ್ಳಲಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರವು ಕೋಲ್ಕತ್ತಾ ಚಿತ್ರೋತ್ಸವದ ಭಾರತೀಯ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗಳಿಸಿತ್ತು. ಈ ಚಿತ್ರ ಬಿ.ಟಿ. ಲಲಿತಾ ನಾಯಕ್‌ ರ ಕಥೆಯನ್ನು ಆಧರಿಸಿ ರೂಪಿಸಲಾಗಿದೆ.

ಈ ಚಿತ್ರದಲ್ಲಿ ಗ್ರೀಷ್ಮಾ ಶ್ರೀಧರ್‌ ಪ್ರಮುಖ ಪಾತ್ರದಲ್ಲಿ  ನಟಿಸಿದ್ದು  ಇವರ ಅಭಿನಯಿಸಿರುವ ಮತ್ತೊಂದು ಸಿನಿಮಾ "ನಾನು ಕುಸುಮ" ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಪ್ರಶಸ್ತಿಯನ್ನೂ ಗಳಿಸಿತ್ತು. ಇತ್ತೀಚೆಗಷ್ಟೇ ಪೂಜಿತಾ ಪ್ರಸಾದ್‌ ನಿರ್ದೇಶನದ ನನ್‌ ಆಫ್‌ ಹರ್‌ ಚಿತ್ರದಲ್ಲೂ ಗ್ರೀಷ್ಮಾಅಭಿನಯಿಸಿದ್ದು, ಇದು ಚೆನ್ನೈ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದೆ.

Category
ಕರಾವಳಿ ತರಂಗಿಣಿ