image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೂರಜ್ ಶೆಟ್ಟಿ ನಿರ್ದೇಶನದ “ಕತೆ ಕೈಲಾಸ” ಸಿನಿಮಾಕ್ಕೆ ಮುಹೂರ್ತ!

ಸೂರಜ್ ಶೆಟ್ಟಿ ನಿರ್ದೇಶನದ “ಕತೆ ಕೈಲಾಸ” ಸಿನಿಮಾಕ್ಕೆ ಮುಹೂರ್ತ!

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ವತಿಯಿಂದ ಶ್ರೀ ಕದಳಿ ಸಿನಿ ಪ್ರೊಡಕ್ಷನ್ ಇವರ ಸೂರಜ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ “ಕತೆ ಕೈಲಾಸ” ಕನ್ನಡ, ತುಳು ಸಿನಿಮಾದ ಮುಹೂರ್ತ ಸಮಾರಂಭ  ಕದ್ರಿ ದೇವಸ್ಥಾನದಲ್ಲಿ ಜರುಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ  ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಿನಿಮಾಕ್ಕೆ ಕ್ಲಾಫ್ ಮಾಡಿ ಮಾತಾಡಿದರು. “ಸೂರಜ್ ಶೆಟ್ಟಿ ನೇತೃತ್ವದಲ್ಲಿ ಮೂಡಿಬರಲಿರುವ ಸಿನಿಮಾ ಜನರನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ. ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ನಡೆದು ತೆರೆಯ ಮೇಲೆ ಬರಲಿ” ಎಂದರು. 

ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಶುಭಾಶಂಸನೆಗೈದರು. ಶ್ರೀರಂಗ ಐತಾಳ್ ದೀಪ ಪ್ರಜ್ವಲನೆಗೈದರು. ಮುಖ್ಯ ಅತಿಥಿಗಳಾಗಿ ಪ್ರಕಾಶ್ ಪಾಂಡೇಶ್ವರ, ಕದ್ರಿ ನವನೀತ ಶೆಟ್ಟಿ, ಶಶಿಧರ ಶೆಟ್ಟಿ,  ಮಹಾಗಣಪತಿ ಟ್ರಾನ್ಸ್ ಪೋರ್ಟ್ ,ಆರ್ ಕೆ ಮಾಧವ ನಾಯ್ಕ್, ಬಾಳ ಜಗನ್ನಾಥ ಶೆಟ್ಟಿ, ರವಿ ರೈ ಕಳಸ, ಲೀಲಾಕ್ಷ ಕರ್ಕೇರ, ಪ್ರೀತಮ್, ಅಜಿತ್ ಚೌಟ ದೇವಸ್ಯ, ಸುದೇಶ್ ರೈ ಸಿಎ, ಸಿಎ ಸುನಿಲ್, ಪ್ರಸಾದ್ ರೈ ಕಲ್ಲಿಮಾರ್, ರತ್ನಾಕರ್ ಜೈನ್, ಸುಧಾಕರ್ ಆಳ್ವ, ಪ್ರವೀಣ್ ಆಳ್ವ, ಲಯನ್ ವಸಂತ್ ಶೆಟ್ಟಿ, ಅಶೋಕ್ ಡಿಕೆ, ಲಯನ್ ಶ್ರೀಧರ್ ರಾಜ್  ಶೆಟ್ಟಿ, ಹರೀಶ್ ಆಳ್ವ  ಲಯನ್ ಚಂದ್ರಹಾಸ ರೈ, ಮಹಾಬಲ ಭಂಡಾರಿ, ರವಿಶಂಕರ್ ರೈ ಉಪಸ್ಥಿತರಿದ್ದರು. 

ನಿರ್ಮಾಪಕರಾದ ಕಿಶೋರ್ ಡಿ ಶೆಟ್ಟಿ,  ಪುರುಷೋತ್ತಮ್ ಭಂಡಾರಿ, ಮೋಹನ್ ಕೊಪ್ಪಲ, ಪ್ರದೀಪ್ ಆಳ್ವ,  ದಿವಾಕರ್ ಶೆಟ್ಟಿ ಹಾಜರಿದ್ದರು.ಕ್ಯಾಮರಾ ಜಾಯಲ್ ಸಮನ್ ಡಿ ಸೋಜ, ಸಂಕಲನ ಪ್ರದೀಪ್ ರಾವ್, ಸಂಗೀತ ನವೀನ್ ಶಂಕರ್, ತಾರಾಗಣದಲ್ಲಿ ವಿಸ್ಮಯ ವಿನಾಯಕ, ಮೈಮ್ ರಾಮದಾಸ್, ಪುಷ್ಪರಾಜ್ ಬೊಳ್ಳಾರ್,  ಗಣೇಶ್ ಆಚಾರ್ಯ, ರಾಘವ ಸೂರಿ, ವಿನೋದ್ ಶೆಟ್ಟಿ, ನವ್ಯಾ ಪೂಜಾರಿ, ದಿವಾಕರ ಕಟೀಲು, ವಾಲ್ಟರ್ ನಂದಳಿಕೆ, ಕದ್ರಿ ನವನೀತ ಶೆಟ್ಟಿ, ಮೋಹನ್ ಕೊಪ್ಪಳ, ಪ್ರದೀಪ್ ಆಳ್ವ ಇದ್ದಾರೆ. 

"ಕತೆ ಕೈಲಾಸ" ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಮುವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.‌ ಸಿನಿಮಾ ಉತ್ತಮ ಕತೆಯನ್ನು ಒಳಗೊಂಡಿದ್ದು, ಸಂಪೂರ್ಣ ಹಾಸ್ಯಭರಿತವಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.

Category
ಕರಾವಳಿ ತರಂಗಿಣಿ