ಮಂಗಳೂರು: ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಇಂದು ಮಂಗಳೂರು ನಗರದ ಹೊರವಲಯದಲ್ಲಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
"ನೆತ್ತರಕೆರೆ" ಹೆಸರಿನಲ್ಲಿ ಮೂಡಿ ಬರುತ್ತಿರುವ ತುಳು ಮತ್ತು ಕನ್ನಡ ಭಾಷೆಯ ಸಿನಿಮಾ ಇದಾಗಿದ್ದು ಈ ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ಅಡುಗೆ ಕೋಣೆಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಚಿತ್ರತಂಡ ಟ್ಯಾಂಕರ್ ಮೂಲಕ ನೀರು ಹಾಕಿ ಬೆಂಕಿ ನಂದಿಸಿದ್ದು, ಈ ವೇಳೆ ಸೆಟ್ ನ ಒಂದು ಭಾಗ ಬೆಂಕಿಗಾಹುತಿಯಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿರುವ ಬಗ್ಗೆ ವರದಿಯಾಗಿಲ್ಲ.
ನೆತ್ತರಕೆರೆ ಸಿನಿಮಾದಲ್ಲಿ ಕಾಂತಾರ ಸಿನಿಮಾದ 'ಗುರುವ' ಖ್ಯಾತಿಯ ಸ್ವರಾಜ್ ಶೆಟ್ಟಿ ನಟನೆ ಮಾಡುತ್ತಿದ್ದು ಈ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶವನ್ನು ಕೂಡ ಅವರೇ ಮಾಡುತ್ತಿದ್ದಾರೆ.