image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್" ಚಿತ್ರ ಸದ್ಯದಲ್ಲೇ ತೆರೆಗೆ...

ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್" ಚಿತ್ರ ಸದ್ಯದಲ್ಲೇ ತೆರೆಗೆ...

ತಮ್ಮ ಅಮೋಘ ಅಭಿನಯದ ಮೂಲಕ ಇಡೀ ದೇಶದಾದ್ಯಂತ ಜನಪ್ರಯರಾಗಿರುವ ಖ್ಯಾತ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ "ಅನಾಮಧೇಯ ಅಶೋಕ್ ಕುಮಾರ್‌".  ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಹಾಗೂ ಚಿತ್ರೀಕರಣ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ಮೋಷನ್ ಪೋಸ್ಟರ್ ಮೂಲಕ ಮೋಡಿ ಮಾಡಿರುವ ಈ ಚಿತ್ರ ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಿರ್ದೇಶಕ ಸಾಗರ್ ಕುಮಾರ್ ಅವರೆ ಕಥೆ  ಬರೆದಿದ್ದಾರೆ. ಚಿತ್ರಕಥೆಯನ್ನು ಬೆನ್ನಿ ಥಾಮಸ್ ಹಾಗೂ ಸಾಗರ್ ಕುಮಾರ್  ಬರೆದಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿರುವ ಸಾಗರ್ ಕುಮಾರ್ ಅವರಿಗೆ‌ ಇದು ಚೊಚ್ಚಲ ನಿರ್ದೇಶನದ ಚಿತ್ರ.  ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಹರ್ಷಿಲ್ ಕೌಶಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಕಾಂತರಾಜ್ ಕಡ್ಡಿಪುಡಿ, ಸುಧೀಂದ್ರನ್ ನಾಯರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

" ಅನಾಮಧೇಯ ಅಶೋಕ್ ಕುಮಾರ್ " ಚಿತ್ರದ ತಮ್ಮ ಪಾತ್ರದ ಕುರಿತು ಕಿಶೋರ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ‌. ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ವಿಭಿನ್ನವಾಗಿದೆ ಎಂದು ತಿಳಿಸಿರುವ ನಟ ಹರ್ಷಿಲ್ ಕೌಶಿಕ್, ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದ್ದು, ನಾನು ನಟಿಸುತ್ತಿರುವ ಇನ್ನೆರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಎಸ್‌ ಕೆ ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ಈ ನಿರ್ಮಿಸಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಅವರ ಸಹ ನಿರ್ಮಾಣವಿದೆ. ಎರಡು ಹಾಡುಗಳಿದ್ದು, ಅಜಾದ್ ಸಂಗೀತ ಸಂಯೋಜಿಸಿದ್ದಾರೆ.    ಸುನೀಲ್ ಹೊನಳ್ಳಿ ಛಾಯಾಗ್ರಹಣ  ಹಾಗೂ ಮತ್ತು ಕೆ.ಯೇಸು ಅವರ ಸಂಕಲನ ಬಹು ನಿರೀಕ್ಷಿತ "ಅನಾಮಧೇಯ ಅಶೋಕ್ ಕುಮಾರ್" ಚಿತ್ರಕ್ಕಿದೆ. ಈ ಚಿತ್ರದ ಮಾರ್ಕೆಟಿಂಗ್ ಪ್ರಿಯಾಂಕ ಅವರು ಮಾಡುತ್ತಿದ್ದಾರೆ.

Category
ಕರಾವಳಿ ತರಂಗಿಣಿ