image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನವರಿ 26ಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಜನವರಿ 26ಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ  ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ10ಕ್ಕೇರಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ  ಪ್ರಶಸ್ತಿ ಪ್ರದಾನ ಸಮಾರಂಭ 2025ರ ಜನವರಿ 26ರ ಭಾನುವಾರ ಸಂಜೆ 5.30ಕ್ಕೆ ಮಾಗಡಿ ರಸ್ತೆಯ MMB legacy (GT MALL). ಯಲ್ಲಿ ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸುಧೀಂದ್ರ ವೆಂಕಟೇಶ್   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ :-ಶ್ರೀಮತಿ ಮೀನಾಕ್ಷಿ ಕೆ.ವಿ. ಜಯರಾಂ (ಹಿರಿಯ ಚಲನಚಿತ್ರ ನಿರ್ಮಾಪಕರು), ಶ್ರೀ ಕೆ.ಜೆ. ಕುಮಾರ್* ( ಹಿರಿಯ ಪತ್ರಕರ್ತರು )

ಡಾ. ರಾಜಕುಮಾರ್ ಪ್ರಶಸ್ತಿ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ (ಖ್ಯಾತ ಹಿನ್ನೆಲೆ ಗಾಯಕರಿಗೆ ನೀಡುವ ಪ್ರಶಸ್ತಿ):-  ಕುಮಾರಿ ಅನುರಾಧಾ ಭಟ್‍(ಗಾಯಕಿ)

ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ ನಿರ್ದೇಶಕರಿಗೆ ನೀಡುವ ಪ್ರಶಸ್ತಿ:-ಶ್ರೀ ಓಂಪ್ರಕಾಶ್‍ ರಾವ್‍(ಹಿರಿಯ ನಿರ್ದೇಶಕರು) 

ನಟಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ (ಹಿರಿಯ ನಟಿ ಅವರಿಗೆ ನೀಡುವ ಪ್ರಶಸ್ತಿ):- ಶ್ರೀಮತಿ ರೇಖಾರಾವ್ (ಹಿರಿಯ ನಟಿ)

ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ (ಅತ್ಯುತ್ತಮ ಸಂಗೀತ ನಿರ್ದೇಶನ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕಾಗಿ):-ಶ್ರೀ ಅರ್ಜುನ್‍ ಜನ್ಯ (ಸಂಗೀತ ನಿರ್ದೇಶಕ), ಶ್ರೀ ಜಯಶಂಕರ್ ಆರ್ಯರ್(ಕಥಾ ಲೇಖಕ ಹಾಗೂ ನಿರ್ದೇಶಕ),

ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ ಕೆ.ವಿ. ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ (ಅತ್ಯುತ್ತಮ ಕಥಾಲೇಖಕರು, ‘ಶಿವಮ್ಮ’ ಚಿತ್ರಕ್ಕಾಗಿ):-ಶ್ರೀ ಚಂದ್ರಜಿತ್ ಬೆಳ್ಳಿಯಪ್ಪ (ಸಂಭಾಷಣೆಕಾರ  ಹಾಗೂ ನಿರ್ದೇಶಕ )

ಖ್ಯಾತ ಚಿತ್ರಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಡಾ.ಎಸ್.ಕೆ. ನರಹರಿ ಅವರಿಂದ (ಅತ್ಯುತ್ತಮ ಸಂಭಾಷಣೆ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ)

ಬಿ. ಸುರೇಶ ಪ್ರಶಸ್ತಿ ಅವರಿಂದ (ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ) -  (ಫೋಟೋ ಚಲನಚಿತ್ರಕ್ಕಾಗಿ):-ಶ್ರೀ ಉತ್ಸವ್‍ ಗೋನ್ವಾರ್  (ನಿರ್ದೇಶಕ)

ಹಿರಿಯ ಪತ್ರಕರ್ತರಾದ ಶ್ರೀ.ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ (‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’):- ಶ್ರೀ ಡಾ||ವಿ.ನಾಗೇಂದ್ರ ಪ್ರಸಾದ್(ಗೀತರಚನೆಕಾರ) ಗೆ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ