image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುರುಷೋತ್ತಮ್ ಅಂಚನ್

ಪುರುಷೋತ್ತಮ್ ಅಂಚನ್

ಬAಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೂಜಂತೋಡಿ ಎಂಬಲ್ಲಿ ಕೊರಗಪ್ಪ ಪೂಜಾರಿ ಮತ್ತು ಶ್ರೀಮತಿ ವಸಂತಿಯವರ ಮೊದಲನೇ ಮಗನಾಗಿ ಒಂದು ಬಡ ಕುಟುಂಬದಲ್ಲಿ ಗುಡಿಸಲಿನಲ್ಲಿ ಹುಟ್ಟಿದ ಪುರುಷೋತ್ತಮ ಅಂಚನ್ ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದಾರೆ. ಈಗ ತನ್ನ ತಮ್ಮಂದಿರ ಜೊತೆ ವ್ಯವಹಾರಗಳಲ್ಲಿ ಮತ್ತು ಅವರು ಮಾಡುವ ಸಮಾಜ ಸೇವೆಗಳಲ್ಲಿ ಭಾಗಿಯಾಗುತ್ತಾ ಕಲಾ ಮಾಧ್ಯಮದ ಆಶ್ರಯವನ್ನು ಪಡೆದಿದ್ದಾರೆ. ಅಂಚನ್ ಅವರು ಪ್ರಾಥಮಿಕ ಶಿಕ್ಷಣವನ್ನು ದಡ್ಡಲಕಾಡು ಶಾಲೆಯಲ್ಲಿ ಮಾಡಿದ ದಿನದಿಂದಲೇ ಕ್ರೀಡಾ ಆಸಕ್ತಿಯನ್ನು ಹೊಂದಿದ್ದರು. ಅಗ್ರಹಾರದ ಕ್ರಿಸ್ತ ಜ್ಯೋತಿ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ ಅಂಚನ್‌ರಿಗೆ ಅಲ್ಲಿನ ಟೀಚರ್ ಎಲಿಜಬೆತ್ ಲೋಬೊರ ಸಹಕಾರ ಮತ್ತು ಮಾರ್ಗದರ್ಶನ ಸಿಕ್ಕಿದ ಕಾರಣ ಸಾಹಿತ್ಯದ ಕಡೆ ಒಲವು ಮೂಡಿ ಸಣ್ಣ ಪುಟ್ಟ ಕಾದಂಬರಿಗಳನ್ನು ಕಿರು ನಾಟಕಗಳನ್ನು ಬರೆಯಲು ಶುರು ಮಾಡಿದರು. ಇದೆಲ್ಲ ಅವರಿಗೆ ಅಭಿನಯದಲ್ಲಿ ಮುಂದುವರಿಯಲು ಸಹಕಾರಿಯಾಯ್ತು ಎಂದು ಹೇಳಬಹುದು. ಹಾಗೇಯೆ ಶಿಕ್ಷಕರಾದರು. ಅಲ್ಲಿ ಕೂಡ ಮಕ್ಕಳಿಗೆ ಕಲೆ, ಕ್ರೀಡೆ ಬಗ್ಗೆ ಒಲವು ಮೂಡಿಸುತ್ತಿದ್ದರು. ನಾಟಕಗಳಲ್ಲಿ ಕಥಾನಾಯಕಿ ಪಾತ್ರಗಳನ್ನು ಮಾಡಲಾರಂಭಿಸಿದರು. ಮಂಗಳೂರು ಮಹಾಲಸದಲ್ಲಿ ಎರಡು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಸಿಸಿದರು. ಇದಾದ ನಂತರ ಕೊಡಗಿನ ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಚಿತ್ರಕಲಾವಿದನಾಗಿ ದುಡಿಯುವ ಅವಕಾಶ ಸಿಕ್ಕಿತು. ಅಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ ಅಂಚನ್, ಅಲ್ಲಿಗೆ ಬರುವ ಪ್ರವಾಸಿಗರನ್ನು ರಂಜಿಸಲು ದಿನಾ ಮೂರು ಗಂಟೆಗಳ ಕಾಲ ೨೦ ಜನ ಕಲಾವಿದರ ಜೊತೆ ಲಲಿತ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನಿರೂಪಣೆ ಮಾಡಿದರು. ಆ ಸಂದರ್ಭದಲ್ಲಿ ತನ್ನ ಗೆಳೆಯ ಮಿತ್ರನಿಗೆ ಬೆಂಗಳೂರಿನಿAದ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಅವಕಾಶ ಬಂತು. ಅವರ ಜೊತೆ ಪುರುಷೋತ್ತಮ್ ಅಂಚನ್ ಕೂಡ ಬೆಂಗಳೂರು ಸೇರಿ ದಾರವಾಹಿಗಳಲ್ಲಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ರಂಗಭೂಮಿಯ ಒಂದು ತಂಡವನ್ನು ಕಟ್ಟಿಕೊಂಡರು. ಇವರಿಗೆ ಕಲಾ ಮಾಧ್ಯಮದಲ್ಲಿ ಆಸಕ್ತಿ ಜಾಸ್ತಿ ಇದ್ದ ಕಾರಣ ಇನ್ನು ಹೆಚ್ಚಿನ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರ ಕಲಾಮಾಧ್ಯಮದ ಅನುಭವ ಹೇಗಿದೆಯೆಂದರೆ, ಅಣ್ಣನ ಆಸೆ ನಾಟಕದಲ್ಲಿ ಸ್ತಿçà ಪಾತ್ರಧಾರಿಯಾಗಿ ರಂಗಪ್ರವೇಶಿಸಿದ ಪುರು ಷೋತ್ತಮ್ ಅಂಚನ್ ಗಿರಿಮಲೆತ್ತ ನಿರೆಲ್, ದೇವೆರ್ ಕೊರುವೆರ್, ಮಾಜಂದಿ ಪಾಪ, ದೇವರ‍್ನ ತೀರ್ಪು, ಕಡಿಯಂದಿನ ಕರಿಮಣಿ, ಪಗೆತ್ತ ಪುಗೆ, ಗಂಗಾರಾಮ್, ಸತ್ಯ ಏರೆಗ್ಲಾ ಗೊತ್ತುಜ್ಜಿ ಮುಂತಾದ ೫೦ ಕ್ಕೂ ಹೆಚ್ಚು ನಾಟಕಗಳಲ್ಲಿ ಆಭಿನಯ ಮಾಡಿದ್ದಾರೆ. ಇದರ ಜೊತೆಗೆ ತೂಪ ದಾದ ಸೇಸ, ಗೊತ್ತಾನಗ ಪೊರ್ತಾಂಡ್, ಮರ್ಲೆದಿನ ತೀರ್ಪು, ಏತ್ ಪಂಡಲ ಆತೆ, ಇಂಚಲಾ ಉಂಡಾ, ಹೀಗಾದರೆ ಹೇಗೆ ಇತ್ಯಾದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಸೈ ಅನ್ನಿಸಿಕೊಂಡರು. ತುಳುನಾಡಿನಲ್ಲಿ ಯಕ್ಷಗಾನಕ್ಕೆ ಅದರದ್ದೇಆದ ಮಹತ್ವ ಇದೆ. ಅದರಿಂದ ಶ್ರೀ ದೇವಿ ಮಹಾತ್ಮೆಯಲ್ಲಿ ಶ್ರೀ ದೇವಿಯಾಗಿ, ಶಶಿಪ್ರಭೆ ಪ್ರಣಯದಲ್ಲಿ ಶಶಿಪ್ರಭೆಯಾಗಿ, ಕೋಟಿ ಚೆನ್ನಯದಲ್ಲಿ ದೇಯಿಯಾಗಿ ಹೀಗೆ ಬೇರೆ ಬೇರೆ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿದರು. ಅಲ್ಲಿಂದ ಒಂದು ಹೆಜ್ಜೆ ಮುಂದಿಟ್ಟ ಅಂಚನ್ ಸಿಲ್ಲಿಲಲ್ಲಿ, ಸಾತು ಪಾತು, ಪಾರ್ವತಿ ಪರಮೇಶ್ವರ, ಮಾಂಗಲ್ಯ, ಕಾಮಿಡಿ ದರ್ಬಾರ್, ಗೊತ್ತಾನಗ ಪೊರ್ತಾಂಡ್ ದಾರಾವಾಹಿಗಳಲ್ಲಿ ಅಭಿನಯ ಮಾಡುತ್ತಾ ಸುರು ಸುರು ಬತ್ತಿ, ಒಂದು ಮೊಟ್ಟೆಯ ಕಥೆ, ಸಮರ್ಥ, ನೀನಾ ಭಗವಂತ, ಒರಿಯನ್ ತೂಂಡ ಒರಿಯಾಗಾಪುಜಿ, ರಾ..ರಾ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದರು. ನಾಟಕದಿಂದ ಸಿನಿಮಾದವರೇಗೆಪ್ರಯಾಣ ಬೆಳೆಸಿದ ಪುರುಷೋತ್ತಮ್ ಅಂಚನ್ ಸರಕಾರಿ ಶಾಲೆಗಳ ಉಳಿವಿನ ಹೋರಾಟದ ನೇತೃತ್ವ ವಹಿಸಿಕೊಂಡರು. ಸರಕಾರಿ ಶಾಲೆ ಉಳಿಸಿ, ಬೆಳೆಸಿ ಕರ್ನಾಟಕ ರಾಜ್ಯ ಸಮಿತಿಯಲ್ಲಿ ರಾಜ್ಯ ಕಾರ್ಯದರ್ಶಿ ಯಾದರು. ಪ್ರಸ್ತುತ ಸರಕಾರಿ ಆಂಗ್ಲ ಮಾಧ್ಯಮ ಶಾಲೆ, ದಡ್ಡಲಕಾಡು ಇದರ ಕಾರ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೆ ಕರಾವಳಿ ತರಂಗಿಣಿಯ ಹಾರೈಕೆ.

Category
ಕರಾವಳಿ ತರಂಗಿಣಿ