image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಭಿನ್ನ ಕಥಾಹಂದರ ಹೊಂದಿರುವ "ನಾಗವಲ್ಲಿ ಬಂಗಲೆ" ಚಿತ್ರಕ್ಕೆ ಕವಿ ರಾಜೇಶ್ ನಿರ್ದೇಶನ

ವಿಭಿನ್ನ ಕಥಾಹಂದರ ಹೊಂದಿರುವ "ನಾಗವಲ್ಲಿ ಬಂಗಲೆ" ಚಿತ್ರಕ್ಕೆ ಕವಿ ರಾಜೇಶ್ ನಿರ್ದೇಶನ

ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು "ನಾಗವಲ್ಲಿ ಬಂಗಲೆ" ನಿರ್ಮಾಣವಾಗಿದೆ.

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಹುಡುಗಿಯರು "ನಾಗವಲ್ಲಿ ಬಂಗಲೆ"ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ "ನಾಗವಲ್ಲಿ ಬಂಗಲೆ"ಯಲ್ಲಿ ಏನೆಲ್ಲಾ ಆಗುತ್ತದೆ. ಎಂಬುದೆ ಚಿತ್ರದ ಪ್ರಮುಖ ಕಥಾಹಂದರ.

ಈಗಾಗಲೇ ಚಿತ್ರೀಕರಣ ಮುಗಿಸಿರುವ "ನಾಗವಲ್ಲಿ ಬಂಗಲೆ"ಯನ್ನು ಸೆನ್ಸಾರ್ ಮಂಡಳಿ ಕೂಡ ವೀಕ್ಷಿಸುದ್ದು, 'U/A' ಪ್ರಮಾಣ ಪತ್ರವನ್ನು ನೀಡಿದೆ. ಬೆಂಗಳೂರು, ನೆಲಮಂಗಲದ ಆಸುಪಾಸಿನಲ್ಲಿ ಚಿತ್ರೀಕರಣವಾಗಿದೆ. 

ಈ ಚಿತ್ರವು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ ಮಂಜು ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿ ರಾಜೇಶ ರವರ ನಿರ್ದೇಶನ, ರೋಹನ್ ದೇಸಾಯಿರವರ ಸಂಗೀತ, ಜೆ. ಎಮ್. ಪ್ರಹ್ಲಾದ್ ರವರ ಕಥೆ -ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ.

ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಅಣಿಯಾಗುತ್ತಿರುವ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನೆ.ಲ.ನರೇಂದ್ರಬಾಬು,‌ ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರಿದ್ದಾರೆ.

Category
ಕರಾವಳಿ ತರಂಗಿಣಿ