image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೆಗಾ ಸುಪ್ರೀಂ ಹೀರೋಗೆ ಗ್ಲೋಬಲ್ ಸ್ಟಾರ್ ಸಾಥ್...! ಸಾಯಿ ದುರ್ಗಾ ತೇಜ್ ನಟನೆಯ ಸಂಬರಾಲ ಏಟಿಗಟ್ಟು ಟೀಸರ್ ರಿಲೀಸ್

ಮೆಗಾ ಸುಪ್ರೀಂ ಹೀರೋಗೆ ಗ್ಲೋಬಲ್ ಸ್ಟಾರ್ ಸಾಥ್...! ಸಾಯಿ ದುರ್ಗಾ ತೇಜ್ ನಟನೆಯ ಸಂಬರಾಲ ಏಟಿಗಟ್ಟು ಟೀಸರ್ ರಿಲೀಸ್

ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಸಾಯಿ ದುರ್ಗಾ ತೇಜ್. ವಿರೂಪಾಕ್ಷ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಸಾಯಿ ದುರ್ಗಾ ತೇಜ್ ಈಗ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮೆಗಾ ಸುಪ್ರೀಂ ಹೀರೋ ನಟನೆಯ ಸಂಬರಾಲ ಏಟಿಗಟ್ಟು ಸಿನಿಮಾದ ಟೈಟಲ್ ಟೀಸರ್ ನ್ನು ಇತ್ತೀಚೆಗಷ್ಟೇ ಹೈದ್ರಾಬಾದ್ ನಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಬಿಡುಗಡೆ ಮಾಡಿದರು.

ಆಕ್ಷನ್ ಪ್ಯಾಕ್ಡ್ "ಸಂಬರಾಲ ಏಟಿಗಟ್ಟು" ಟೀಸರ್ ನಲ್ಲಿ ಸಾಯಿ ದುರ್ಗಾ ತೇಜ್ ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿರುವ ಅವರು ರಕ್ತಸಿಕ್ತ ಇತಿಹಾಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಯುವ ಪ್ರತಿಭೆ ರೋಹಿತ್ ಕೆ ಪಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವೆಟ್ರಿವೇಲ್ ಪಳನಿಸ್ವಾಮಿ ಛಾಯಾಗ್ರಹಣ, ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ನವೀನ್ ವಿಜಯಕೃಷ್ಣ ಸಂಕಲನ ಸಂಬರಾಲ ಏಟಿಗಟ್ಟು ಚಿತ್ರಕ್ಕಿದೆ. ಈ ವರ್ಷ ಹನುಮಾನ್ ನಂತಹ ಹಿಟ್ ಕೊಟ್ಟಿರುವ ಕೆ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ನಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ತೆಲುಗು , ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಮುಂದಿನ ವರ್ಷದ ಸೆಪ್ಟೆಂಬರ್ 25ಕ್ಕೆ ಬಿಡುಗಡೆಯಾಗಲಿದೆ.

Category
ಕರಾವಳಿ ತರಂಗಿಣಿ