ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ಸೆವೆಂಟಿ ಸೆವೆಂಟಿ ಸೆವೆನ್ ಸ್ಟೂಡಿಯೋಸ್ ಲಾಂಛನದಲ್ಲಿ ರಾಘವೇಂದ್ರ ಕುಡ್ವ ನಿರ್ಮಾಣದ ಅನೀಶ್ ಪೂಜಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ತುಳು ಚಿತ್ರ "ದಸ್ಕತ್" ತರೆಗೆ ಬರಲು ಸಿದ್ದವಾಗಿದ್ದು, ಇದೇ ಬರುವ ಶುಕ್ರವಾರ ಡಿಸೆಂಬರ್ 13ರಂದು ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅನೀಶ್ ಪೂಜಾರಿ "ಗ್ರಾಮೀಣ ಭಾಗಗಳಲ್ಲಿ ಸಾದಾರಣವಾಗಿ ನಡೆಯುವ ವಿಷಯವನ್ನು ತಗೆದುಕೊಂಡು ಪಕ್ಕಾ ಕಮರ್ಷಿಯಲ್ ಮಾಡಿದ್ದೇವೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ವಿನಂತಿಸಿದರು. ನಟ ಅರ್ಜುನ್ ಕಾಪಿಕಾಡ್ ಮಾತನಾಡಿ " ಈ ಚಿತ್ರದಲ್ಲಿ ನಾನು ಅಭಿನಯಿಸಿಲ್ಲ. ಒಂದು ವಿಭಿನ್ನ ಪ್ರಯತ್ನ ಮಾಡಿದೆ ಚಿತ್ರ ತಂಡ. ನಮಗೂ ಇಂತಹ ಚಿತ್ರ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ಇವರು ಮಾಡಿದ್ದಾರೆ. ನಾನು ಚಿತ್ರ ನೋಡಿದ್ದೇನೆ. ಎಲ್ಲರೂ ನೋಡಬೇಕಾದ ಚಿತ್ರ ಎಂದರು.
ವಿತರಕ ಸಚಿನ್ ಉಪ್ಪಿನಂಗಡಿ ಮಾತನಾಡಿ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕರಾವಳಿಯ 15 ಚಿತ್ರಮಂದಿರಗಳಲ್ಲಿ ಮೊದಲಿಗೆ ಚಿತ್ರ ಬಿಡುಗಡೆಗೊಳಿಸಲಾಗುತ್ತದೆ. ನಂತರ ಮುಂಬೈ ಮತ್ತು ವಿದೇಶದಲ್ಲಿ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ ಎಂದರು.
ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಅಂಡಿಂಜೆ, ಭವ್ಯ ಪೂಜಾರಿ, ನೀರಜ್ ಕುಂಪರ್ಜ, ಮೋಹನ್ ಶೇಣಿ, ಮಿಥುನ್ ರಾಜ್, ಚಂದ್ರಹಾಸ್ ಉಲ್ಲಾಳ್, ನವೀನ್ ಬೊಂದೆಲ್, ಯೋಗೀಶ್ ಶೆಟ್ಟಿ, ಚೇತನ್ ಪಿಲಾರ್, ತಿಮ್ಮಪ್ಪ ಕುಲಾಲ್ ಮತ್ತು ಭಗವಾನ್ ಮತ್ತಿತರರಿದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಜೇಶ್ ಶೆಟ್ಟಿ, ಛಾಯಾಗ್ರಹಣ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನ ಗಣೇಶ್ ನೀರ್ಜಾಲ್, ಸಂಗೀತ ಸಮರ್ಥನ್ ಎಸ್ ರಾವ್ ಅವರದು.