ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಚಿತ್ರೀಕರಣ ಚಿತ್ರದುರ್ಗದ ಬಳಿ ನಡೆಯುತ್ತಿದ್ದಾಗ ಡ್ರೋನ್ ಕ್ಯಾಮೆರಾ ಆಕಸ್ಮಿಕವಾಗಿ ವಿಂಡ್ ಫ್ಯಾನ್ ಗೆ ಸಿಲುಕಿ ಹಾನಿಯಾಗಿತ್ತು. ಇದೊಂದು ಆಕಸ್ಮಿಕ ಘಟನೆ. ಆದರೆ ಡ್ರೋನ್ ಟೆಕ್ನೀಷಿಯನ್ ಸಂತೋಷ್ ಅವರು ಡ್ರೋನ್ ಕ್ಯಾಮೆರಾ ಗೆ ಆದ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಹಾಗೂ ಚಿತ್ರದ ನಾಯಕ, ನಿರ್ದೇಶಕ ಹಾಗೂ ಛಾಯಾಗ್ರಾಹಕರ ಮೇಲೆ ದೂರು ನೀಡಿದ್ದರು. ಚಿತ್ರತಂಡ ಸಹ ಇದು ಆಕಸ್ಮಿಕ ಘಟನೆ. ಯಾರದೂ ತಪ್ಪಿಲ್ಲ ಎಂದು ಹೇಳಿತ್ತು. ಆದರೆ ಟೆಕ್ನಿಷಿಯನ್ ಸಂತೋಷ್ ಅವರಿಗೆ ಇದು ಆರ್ಥಿಕವಾಗಿ ದೊಡ್ಡ ಪೆಟ್ಟಾಗಿದೆ. ಹಾಗಾಗಿ ಈಗ ಟೆಕ್ನೀಷಿಯನ್ ಸಂತೋಷ್ ಹಾಗೂ ಚಿತ್ರತಂಡದ ನಡುವೆ ನಡೆದಿರುವ ಸಂಧಾನ ಸಫಲವಾಗಿದೆ.
ನಿರ್ಮಾಪಕರು ಟೆಕ್ನೀಷಿಯನ್ ಸಂತೋಷ್ ಅವರಿಗೆ ಪರಿಹಾರ ನೀಡಿದ್ದಾರೆ. ಸಂತೋಷ್ ಅವರು ಕೇಸ್ ಹಿಂಪಡೆದುಕೊಂಡಿದ್ದಾರೆ. ಈ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.